ಬೆಂಗಳೂರು : ಕಾಂಗ್ರೆಸ್ ಸಿಎಂ ಆಗುವ ಕನಸು ಕಂಡಿದ್ದ ಡಾ.ಜಿ ಪರಮೇಶ್ವರ್ ಕೊನೆಗೆ ಡಿಸಿಎಂ ಆಗಬೇಕು ಎಂದುಕೊಂಡರೂ ಸಹ ಅದು ಸದ್ಯವಾಗಿರಲಿಲ್ಲ. ಸದ್ಯ ಸಿದ್ದು ಸಂಪುಟದಲ್ಲಿ ಗೃಹ ಖಾತೆಯ ಜವಾಬ್ದಾರಿ ಹೊತ್ತಿರುವ ಡಾ. ಜಿ ಪರಮೇಶ್ವರ್ ಮತ್ತೊಮ್ಮೆ ಬಹಿರಂಗವಾಗಿ ಸಿಎಂ ಆಗುವ ಬಯಕೆಯನ್ನು ಹೊರ ಹಾಕಿದ್ದಾರೆ .

ಪರಿಶಿಷ್ಟ ಸಮುದಾಯಗಳ ಸಹೋದರೋತ್ವ ಸಮಾವೇಶದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಡಾ.ಜಿ. ಪರಮೇಶ್ವರ್, ನಾನ್ಯಾಕೆ ಸಿಎಂ ಆಗಬಾರದು..? ನನ್ನ ಅಧ್ಯಕ್ಷತೆಯಲ್ಲಿಯೂ ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು, ಆದರೆ ನಾನು ಎಲ್ಲಿಯೂ ನನ್ನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಅಂತಾ ಹೇಳಿಕೊಂಡು ತಿರುಗಲಿಲ್ಲ ಎಂದಿದ್ದಾರೆ.
ನೀವು ಪ್ರತ್ಯೇಕ ಕಾರ್ಯಕ್ರಮಗಳನ್ನು ಮಾಡಬೇಕು ಅಂತಾ ಪಕ್ಷದಿಂದ ಆದೇಶ ಬಂದಿತ್ತು. ಆದರೆ ನಾನು ಹಾಗೂ ಕೆಹೆಚ್ ಮುನಿಯಪ್ಪ ಒಡೆದು ಆಳುವ ನೀತಿಯನ್ನು ಒಪ್ಪಲಿಲ್ಲ ಎಂದು ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ನನಗೂ ಪ್ರತ್ಯೇಕ ಕಾರ್ಯಕ್ರಮ ಮಾಡೋಕೆ ಪಕ್ಷದಿಂದ ಆದೇಶ ಮಾಡಿದ್ರು. ಆದರೆ ಅದಕ್ಕೆ ನಾನು ಹಾಗೂ ಕೆಎಚ್ ಮುನಿಯಪ್ಪ ಒಪ್ಪಿಲ್ಲ. ನಮ್ಮನ್ನು ಒಡೆದು ಆಳುವ ನೀತಿ ಆದರೆ ಒಪ್ಪೋದು ಬೇಡ ಅಂತಾ ನಾವು ಇಬ್ರು ಡಿಸೈಡ್ ಮಾಡಿದ್ವಿ ಆ ನಂತರ ಒಂದಾಗಿ ಕಾರ್ಯಕ್ರಮ ಮಾಡುವ ತೀರ್ಮಾನ ಮಾಡಿದ್ವಿ ಆಮೇಲೆ ಚಿತ್ರದುರ್ಗದಲ್ಲಿ ಐಕ್ಯತೆ ಸಮಾವೇಶ ಮಾಡಿದ್ವಿ ಅಂತ ಪರಮೇಶ್ವರ್ ಹೇಳಿದ್ರು.