ಉಪಚುನಾವಣೆಗೆ ಚನ್ನಪಟ್ಟಣದಿಂದ (Channapattana) ಸಿಪಿ ಯೋಗೇಶ್ವರ್ (Cp yogeshwar) ಕಾಂಗ್ರೆಸ್ ನಿಂದ ಅಭ್ಯರ್ಥಿ ಆಗ್ತಿದ್ದಂತೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (chaluvaraya swamy) ಅಂತರ ಕಾಯ್ದುಕೊಂಡಿದ್ದಾರೆ. ಚಲುವರಾಯಸ್ವಾಮಿಯವರನ್ನ ಡಿಕೆ ಬ್ರದರ್ಸ್ ನಿರ್ಲಕ್ಷಿಸಿದ್ರಾ ಎಂಬ ಚರ್ಚೆ ಶುರುವಾಗಿದೆ.
ಯಾಕಂದ್ರೆ ಸದ್ಯ ಯೋಗೇಶ್ವರ್ ಸ್ಪರ್ಧೆ ಸಚಿವ ಚೆಲುವರಾಯಸ್ವಾಮಿ ಗೆ ಯೋಚನೆ ಶುರುವಾಗಿದೆ. ಯಾಕಂದ್ರೆ ಒಂದು ವೇಳೆ ಸಿಪಿವೈ ಗೆದ್ದರೆ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಪ್ರಬಲ ಒಕ್ಕಲಿಗ ನಾಯಕ ಸೃಷ್ಟಿಯಾಗ್ತಾರೆ.
ಹೀಗಾಗಿ ಸದ್ಯ ಡಿಕೆಶಿ (Dk shivakumar) ಬಿಟ್ರೆ ಹಳೆ ಮೈಸೂರು ಭಾಗದಲ್ಲಿ ಚಲುವರಾಯಸ್ವಾಮಿ ಪ್ರಬಲ ಒಕ್ಕಲಿಗ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದ ತಮ್ಮ ಸ್ಥಾನಕ್ಕೆ ಕುತ್ತು ಬರುವ ಭೀತಿಯಿಂದ ಬೈ ಎಲೆಕ್ಷನ್ ನಿಂದ ದೂರ ದೂರ ಉಳಿದ್ರಾ ಅನ್ನೋ ಪ್ರಶ್ನೆ ಉದ್ಭವವಾಗಿವೆ.