ಎಷ್ಟೊ ಜನಕ್ಕೆ ಹಸಿವಾಗುವುದಕ್ಕೆ ಟೈಮಿಂಗ್ಸ್ ಇಲ್ಲ.. ಕಲವರು ಆಗಷ್ಟೆ ಊಟವನ್ನು ಮುಗಿಸಿರುತ್ತಾರೆ.. ಆದರೆ ತಕ್ಷಣಕ್ಕೆ ಹಸಿವು ಎನ್ನುತ್ತಾರೆ..ಸರಿಯಾಗಿ ಊಟ ಮಾಡದೆ ಹಸವು ಅಂದ್ರೆ ಒಂದು ಲೆಕ್ಕೆ. ಆದ್ರೆ ಹೊಟ್ಟೆ ತುಂಬ ಊಟ ಮಾಡಿಯು ಹಸಿವು ಎನ್ನುವವರ ಸಂಖ್ಯೆ ಕೂಡಾ ಹೆಚ್ಚಿದೆ. ಇನ್ನು ಕೆಲವರಿಗೆ ರಾತ್ರಿ ಅಂದ್ರೆ ಮಧ್ಯರಾತ್ರಿ ಹಸಿವು ಹೆಚ್ಚಿರುತ್ತದೆ….ಹಸಿವಿನ ಸಮಸಯದಲ್ಲಿ ತಿನ್ನದಿದ್ದರೆ, ನಿದ್ದೆ ಬರುವುದಿಲ್ಲ, ಹಾಗೂ ಗ್ಯಾಸ್ಟ್ರಿಕ್ ಸಮಸ್ಯ ಎದುರಾಗುತ್ತದೆ..ಕೆಲವರಿಗೆ ಇದು ಅಭ್ಯಾಸವು ಆಗಿಬಿಡುತ್ತದೆ..ಈ ಅಭ್ಯಾಸದಿಂದ ಹೊರಬರಲು ಈ ಟ್ರಿಕ್ಸ್‌ನ ಟ್ರೈ ಮಾಡಿ.
- ರಾತ್ರಿ ಊಟಕ್ಕೆ ಹೆಚ್ಚು ಕಾರ್ಬೋಹೈಡ್ರೇ,ಫೈಬರ್ ಹಾಗೂ ಪ್ರೋಟಿನ್ ಜಾಸ್ತಿ ಇರುವ ಆಹರವನ್ನು ಸೇವಿಸಿ..ಇದು ರಾತ್ರಿ ವೇಳೆ ಹಸಿವನ್ನು ನೀಗಿಸುತ್ತದೆ..
- ಸ್ವೀಟ್ ಪೊಟ್ಯಾಟೊವನ್ನು ಬೇಹಿಸಿ ತಿನ್ನುವದರಿಂದ ಹೊಟ್ಟೆ ತುಂಬುತ್ತದೆ.. ಹಾಗೂ ಹಸಿವು ಆಗುವುದಿಲ್ಲಾ
- ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಮತ್ತು ಒಂದು ಮೊಟ್ಟೆಯನ್ನು ಸೇವಿಸಿ ಮಲಗುವುದರಿಂದ ಮಧ್ಯರಾತ್ರಿ ಹಸಿವನ್ನು ತಡೆಯಬಹುದು..
- ಪಚ್ಚಬಾಳೆಹಣ್ಣು ಕೂಡಾ ಉತ್ತಮ ಪರಿಹಾರ..ಊಟದ ನಂತ್ರ ಒಂದು ಬಾಳೆಹಣ್ಣನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ..ಹಾಗೂ ಇದರಲ್ಲಿ ಹೆಚ್ಚು ಪ್ರೋಟಿನ್ ಹಾಗೂ ಕ್ಯಲೋರಿ ಅಂಶ ಇರುವುದರಿಂದ ಹಸಿವು ಹೆಚ್ಚಿರುವುದಿಲ್ಲಾ..
- ಹಾಗೂ ಹೆಚ್ಚು ಮಟ್ಟದಲ್ಲಿ ನೀರನ್ನು ಕುಡಿಯುವುದರಿಂದ ತಡರಾತ್ರಿ ಹಸಿವಾಗುವುದು ಕಡಿಮೆಯಾಗುತ್ತದೆ.
- ಒತ್ತಡವನ್ನು ಕಡಿಮೆ ಮಾಡಿಕೊಂಡಯ ಮತ್ತು ವಿಶ್ರಾಂತಿಯನ್ನು ಪಡೆಯಿರೆ. ಇದಕ್ಕಾಗಿ ಮಲಗುವ ಮುನ್ನ ಆಳವಾದ ಉಸಿರಾಟ, ಮೆಡಿಟೇಶನ್ ಮಾಡುವುದರಿಂದ ನಿದ್ದೆಯ ನಡುವೆ ಎಚ್ಚರವಾಗುವುದಿಲ್ಲ.
- ತಡರಾತ್ರಿಯ ಹಸಿವನ್ನು ತಡೆಯಲು ನೀವು ಪ್ರಿ-ಬೆಡ್ಟೈಮ್ ಸ್ನ್ಯಾಕ್ ಗೆ ಪೀನಟ್ಟ್ ಬಟ್ಟರ್‌ನ ಸೇವಿಸುವುದು ಉತ್ತಮ..ಇದು ಬಾಯಿಗೆ ರುಚಿ ಹಾಗೂ ಉತ್ತಮ ಆಹಾರ..
- ಬಾದಾಮಿ, ಪಿಸ್ತಾ ಮತ್ತು ಗೋಡಂಬಿಗಳಂತಹ ಡ್ರೈ ಫ್ರೂಟ್ಸ್‌ನಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ, ಅದು ತಡರಾತ್ರಿಯ ಹಸಿವನ್ನು ಕಡಿತಗೊಳಿಸುತ್ತದೆ..