ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಶನಿವಾರ ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಲ್ಲಿ (MGNREGA) ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ಆರೋಪ ಹೊರಿಸಿದ್ದಾರೆ. “ಎಂದಿಗೂ ಅರ್ಜಿಯೇ ಸಲ್ಲಿಸದ ಜನರ ಹೆಸರಿನಲ್ಲಿ ನೂರಾರು ಜಾಬ್ ಕಾರ್ಡ್ಗಳನ್ನು ಮೋಸದಿಂದ ರಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ನಕಲಿ ಜಾಬ್ ಕಾರ್ಡ್ಗಳು, ಬ್ಯಾಂಕ್ ಖಾತೆಗಳು, ಎಟಿಎಂ ಕಾರ್ಡ್ಗಳನ್ನು ರಚಿಸಿ ಹಣವನ್ನು ಯೋಜಿತ ರೀತಿಯಲ್ಲಿ ದುರುಪಯೋಗಪಡಿಸಲಾಗಿದೆ ಎಂದು ಅವರು ಸಾಕ್ಷ್ಯದ ಆಧಾರದ ಮೇಲೆ ಆರೋಪಿಸಿದ್ದಾರೆ.
ಅಹ್ಮದಾಬಾದ್ನಲ್ಲಿ ಶನಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೇವಾನಿ ಮತ್ತು ಪಟೇಲ್ ಅವರು ಲಾಕ್ಡೌನ್ ಮತ್ತು ಆರ್ಥಿಕ ಕುಸಿತದಿಂದಾಗಿ ಬಡ ಜನರು ಹೆಚ್ಚು ತೊಂದರೆ ಅನುಭವಿಸುತ್ತಿರುವ ಸಮಯದಲ್ಲಿ, ರಾಜ್ಯ ಸರ್ಕಾರವು ನ್ಯಾಯಕ್ಕಾಗಿ ಸಲ್ಲಿಸಿದ ದೂರುಗಳ ಕಡೆಗೆ ಹಾಗೂ ಸಂತ್ರಸ್ತರ ಕಡೆಗೆ ದೃಷ್ಟಿ ಹಾಯಿಸದೆ ಕುಳಿತಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಡವರಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲು ಬೇಕಾದಷ್ಟು ಪುರಾವೆಗಳು ನಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ.
ಕರೋನವೈರಸ್ ನಂತರದ ಏಕಾಏಕಿ ಲಾಕ್ಡೌನ್ ಕಾರಣ, MGNREGA ಯೋಜನೆಯಡಿ ಉದ್ಯೋಗಗಳ ಬೇಡಿಕೆ ರಾಜ್ಯದಲ್ಲಿ ಅತಿಯಾಗಿದೆ ಎಂದು ಹೇಳಲಾಗಿದೆ. ನಗರಗಳಿಂದ ಹಳ್ಳಿಗಳಿಗೆ ಮರಳಿದ ವಲಸೆ ಕಾರ್ಮಿಕರಿಂದಾಗಿ ಮೊದಲ ಬಾರಿಗೆ ಉದ್ಯೋಗದ ಬೇಡಿಕೆಯನ್ನು ದ್ವಿಗುಣಗೊಳಿಸಿದೆ. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ, ಒಂದು ವರ್ಷದಲ್ಲಿ 100 ದಿನಗಳ ಖಾತರಿಯ ಕೆಲಸವನ್ನು ಒದಗಿಸುತ್ತದೆ, ಇದಕ್ಕಾಗಿ ಅವರು ಅರ್ಜಿ ಸಲ್ಲಿಸಬೇಕು, ಜಾಬ್ ಕಾರ್ಡ್ ಪಡೆಯಬೇಕು, ಬ್ಯಾಂಕ್ ಖಾತೆಗಳನ್ನು ತೆರೆಯಬೇಕು ಮತ್ತು ಕಾರ್ಯಕ್ಷೇತ್ರದಲ್ಲಿಯೇ ಮಸ್ಟರ್ ರೋಲ್ಗಳಲ್ಲಿ ಸಹಿ ಮಾಡಬೇಕು.
ಬನಸ್ಕಾಂತ ಜಿಲ್ಲೆಯ ಬಲುಂದ್ರ ಗ್ರಾಮದ 16 ನಿವಾಸಿಗಳು ದಾಖಲೆಗಳೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು, ಅಲ್ಲಿ ಅಪರಿಚಿತ ಜನರು ತಮ್ಮ ಹೆಸರಿನಲ್ಲಿ ಹಣವನ್ನು ಮೋಸದಿಂದ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಇದುವರೆಗೂ ಅವರು ಎಂದಿಗೂ ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸಲಿಲ್ಲ, ಖಾತೆ ರಚಿಸಲು ಬ್ಯಾಂಕುಗಳಿಗೆ ಹೋಗಲಿಲ್ಲ ಮತ್ತು ಎಟಿಎಂ ಕಾರ್ಡ್ಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
“ನಾನು ಮೂರು ವರ್ಷಗಳಿಂದ ಹಳ್ಳಿಯಿಂದ ದೂರ ವಾಸಿಸುತ್ತಿದ್ದೆ ಮತ್ತು ಲಾಕ್ಡೌನ್ ಮಾಡಿದ ಬಳಿಕ ಮರಳಿದೆ. ಕೆಲವು ದಿನಗಳ ಹಿಂದೆ, MGNREGA ಅಡಿಯಲ್ಲಿ ನನ್ನ ಹೆಸರಿನಲ್ಲಿ ಜಾಬ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಇರುವುದನ್ನು ನಾನು ತಿಳಿದುಕೊಂಡೆ. ನಾನು ಎಂದಿಗೂ ಅರ್ಜಿ ಸಲ್ಲಿಸದ ಕಾರಣ ನನಗೆ ಆಶ್ಚರ್ಯವಾಯಿತು ಅದಕ್ಕಾಗಿ. ಶೌಚಾಲಯ ನಿರ್ಮಿಸುವುದು ಸೇರಿದಂತೆ ವಿವಿಧ ಯೋಜನೆಗಳಿಗೆ ಸಾಲಕ್ಕಾಗಿ ನಾನು ಅರ್ಜಿ ಸಲ್ಲಿಸಿದ್ದ ಗ್ರಾಮ ಪಂಚಾಯಿತಿಯಿಂದ ವಂಚಕರು ನನ್ನ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ”ಎಂದು ಬಲೂಂದ್ರ ಗ್ರಾಮದ ನಿವಾಸಿ ಕಿರಣ್ ಪರ್ಮಾರ್ ಹೇಳಿದ್ದಾರೆ.
ಬಲೂಂದ್ರ ಗ್ರಾಮದಲ್ಲಿ ನಾವು ಕಂಡುಕೊಂಡದ್ದು ಕೇವಲ ಕೆಲವು ಪ್ರಕರಣಗಳು. ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರ ತನಿಖೆ ನಡೆಸಿ ಎಫ್ಐಆರ್ ದಾಖಲಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಜಿಲ್ಲೆಯ ವಡ್ಗಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೇವಾನಿ ಹೇಳಿದ್ದಾರೆ.
ಕೇವಲ ಈ ಗ್ರಾಮದಲ್ಲಿ ಮಾತ್ರ 260 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.







