ಬೆಂಗಳೂರಿನ ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಮೆಟ್ರೋ ರೈಲು (Bommanahalli cross Metro Station Accident) ಅಪಘಾತವಾಗಿದೆ, ವೈರಲ್ ಆದ ವಿಡಿಯೋವನ್ನು ಎಐ ಮೂಲಕ ಸೃಷ್ಟಿ ಮಾಡಲಾಗಿದೆ

ಬೆಂಗಳೂರು ಜನರ ಸಾರಿಗೆ ಸಂಚಾರದ ಜೀವನಾಡಿಯಾದ ನಮ್ಮ ಮೆಟ್ರೋ ಪ್ರಯಾಣ ಈಗ ಜೇಬಿಗೆ ಕತ್ತರಿ ಹಾಕುತ್ತಿದೆ. 2017ರ ಬಳಿಕ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ಪರಿಷ್ಕೃತ ಪ್ರಯಾಣ ದರ ಜಾರಿಗೆ ಬಂದು ಒಂದು ತಿಂಗಳು ಕಳೆದಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿ ದಿನ ಒಂದು ಲಕ್ಷ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನೆಗಳು ಇನ್ನೂ ಸಹ ಮುಂದುವರೆದಿದೆ. ಆದರೆ ಬಿಎಂಆರ್‌ಸಿಎಲ್ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬೆಂಗಳೂರು ನಗರದ ಪ್ರಮುಖ ಸಾರಿಗೆ ಮಾಧ್ಯಮವಾಗಿ ನಮ್ಮ ಮೆಟ್ರೋ ಗುರುತಿಸಿಕೊಂಡಿದೆ. ಪ್ರಯಾಣ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡೋ ಮೂಲಕ ದೇಶದಾದ್ಯಂತ ಸುದ್ದಿಯಾದ ಬೆಂಗಳೂರಿನ ನಮ್ಮ ಮೆಟ್ರೋ, ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಈಗಾಗ್ಲೆ ರೈಲುಗಳ ಪರೀಕ್ಷಾರ್ಥ ಸಂಚಾರವನ್ನು ನಡೆಸುತ್ತಿದೆ. ಹಾಗೇ ಚಾಲಕ ರಹಿತ ಮೆಟ್ರೋದ ಪರೀಕ್ಷೆಗಳನ್ನೂ ಮಾಡಲಾಗುತ್ತಿದೆ. ಇದೀಗ ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಮೆಟ್ರೋ ರೈಲು ಅಪಘಾತಕ್ಕೊಳಗಾಗಿದೆ ಎಂದು ವಿಡಿಯೋ ಒಂದು ಹರಿದಾಡುತ್ತಿದೆ.

ಮಾರ್ಚ್ 05, 2025ರಂದು ಇನ್‌ಸ್ಟಾಗ್ರಾಮ್ (Instagram Users) ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಬೊಮ್ಮನಹಳ್ಳಿಯ ಪ್ರೈ ಓವರ್ ಬಳಿ ಇದ್ದ ಇದರಲ್ಲಿ ರೈಲ್ವೇ ಟ್ರ್ಯಾಕ್ ಇದ್ದ ನೆಲದ ಭಾಗ ಕುಸಿದಿರುವುದು ಕಾಣಿಸುತ್ತದೆ. ಜತೆಗೆ ರೈಲು ಅಪಘಾತಕ್ಕೆ ಒಳಗಾಗಿರುವುದನ್ನು ಕಾಣಬಹುದು. ‘ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್’ (Bangalore Bommanahalli Cross) ಎಂಬ ಶೀರ್ಷಿಕೆಯೊಂದಿಗೆ ಮೆಟ್ರೋ ಅಪಘಾತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕಿನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಮಾರ್ಚ್ 06, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು #trending #shorts #reels #viralvideo ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ‘ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್’ ಎಂಬ ಕ್ಯಾಪ್ಟನ್‌ನ್ನು ನೀಡಿ ಹಂಚಿಕೊಂಡಿದ್ದಾರೆ.
FACT CHECK: ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫೋಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ. ಇದೇ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ಎಂಬ ವಿವರ ಮಾತ್ರ ಎಲ್ಲಿಯೂ ಸಿಗಲಿಲ್ಲ. ನಂತರ ನಾವು ಕೆಲವು ಪ್ರಮುಖ ಕೀವರ್ಡ್ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ತಿಳಿದು ಬಂದಿದ್ದೇನೆಂದರೆ, ಬೊಮ್ಮನಹಳ್ಳಿ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಬರುತ್ತದೆ. ಅಲ್ಲಿಗೆ ಇನ್ನೂ ಮೆಟ್ರೋ ಸಂಚಾರ ಆರಂಭವಾಗಿಲ್ಲ. ಅಲ್ಲದೆ, ಚಿತ್ರದಲ್ಲಿ ಇರುವ ಮೆಟ್ರೋ ರೈಲು ನೀಲಿ ಬಣ್ಣದಲ್ಲಿದೆ. ಬೆಂಗಳೂರಿನಲ್ಲಿ ಸದ್ಯ ಇರುವುದು ಹಸಿರು ಹಾಗೂ ನೇರಳೆ ಮಾರ್ಗ ಮಾತ್ರ.
ನಮ್ಮ ಮೆಟ್ರೋ ಅಪಘಾತ ನಡೆದಿದ್ದೇಯಾ ಎಂದು ತಿಳಿದುಕೊಳ್ಳಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಯಾವುದೇ ಫಲಿತಾಂಶ ನಮಗೆ ಸಿಗಲಿಲ್ಲ. ಒಂದು ವೇಳೆ ಅಪಘಾತ ಸಂಭವಿಸಿದ್ದರೆ, ಮಾಧ್ಯಮಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಈ ವಿಷಯದ ಕುರಿತು ವರದಿಯಾಗುತ್ತಿತ್ತು. ಆದರೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಂತರ ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಆದ ವಿಡಿಯೋವಿನ ಹಲವು ಫೋಮ್‌ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು. ಅಷ್ಟೇ ಅಲ್ಲ ವಿಡಿಯೋದಲ್ಲಿ ಕಾಣುವ ಕೆಲವು ವ್ಯಕ್ತಿಗಳ ವಿಡಿಯೋವಿನ ಕೆಲವು ಪ್ರೇಮ್‌ಗಲಲ್ಲಿ ಕಾಣೆಯಾಗುವುದನ್ನು ಗಮನಿಸಿದರೆ ನಮಗೆ ಈ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಅನುಮಾನ ಬಂದಿತು.

ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಪ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ‘ಸೈಟ್ ಇಂಜಿನ್’ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 97% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ‘ಹೈವ್ ಮಾಡರೇಶನ್’ ನಲ್ಲಿ ಫೋಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.3 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.

ಅಷ್ಟೇ ಅಲ್ಲ ವೈರಲ್ ಆದ ವಿಡಿಯೋದಲ್ಲಿ ಬಲಗಡೆ ಕೆಳ ಭಾಗದಲ್ಲಿ Hailua Al ಎಂಬ ವಾಟರ್ ಮಾರ್ಕ್ ಇರುವುದನ್ನು ನೋಡಬಹುದು.
ಈ Hailua Al ನಾವು ಕೊಡುವ ವಾಕ್ಯಗಳನ್ನು ಉಪಯೋಗಿಸಿ ಎಐ ಬಳಸಿಕೊಂಡು ಚಿತ್ರಗಳನ್ನು ಮತ್ತು ಹೈ-ಡೆಫನೇಷನ್ ವಿಡಿಯೋಗಳನ್ನು ರಚಿಸುವ ಸಾಧನೆಯಿದು ಎಂದು ತಿಳಿದು ಬಂದಿದೆ.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ಈ Fact Check ಅನ್ನು Telugu Fast ರವರು ಪ್ರಕಟಿಸಿದ್ದಾರೆ ಮತ್ತು ಶಕ್ತಿ ಕಲೆಕ್ಟೀವ್ ನ ಭಾಗವಾಗಿ Telugu Fast ರವರಿಂದ ಮರುಪ್ರಕಟಿಸಲಾಗಿದೆ.