ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿ ಮತ್ತು ಪೋಟೋಗಳನ್ನು ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐಗೆ ರವಾನಿಸುತ್ತಿದ ಎಂಬ ಆರೋಪದ ಮೇಲೆ ಬೆಂಗಳೂರಿನ ಕಾಟನ್ಪೇಟ್ನಲ್ಲಿ ಬಟ್ಟೆ ವ್ಯಾಪರ ನಡೆಸುತ್ತಿದ ರಾಜಸ್ಥಾನ ಮೂಲದ ಜಿತೇಂದರ್ ಸಿಂಗ್ ರಾಥೋಡ್ನನ್ನು ಬಂಧಿಸಲಾಗಿದೆ.
ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೋ ತಂಡ ಮತ್ತು ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಮಿಲಿಟರಿ ಕಮಾಂಡೋ ವೇಷ ಧರಿಸಿ ದೇಶದ ಪ್ರಮುಖ ಸೇನಾ ನೆಲೆಗಳ ಪೋಟೋಗಳನ್ನು ಫೇಸ್ಬುಕ್ ಮೂಲಕ ಕಳುಹಿಸುತ್ತಿದ್ದದು ತನಿಖೆ ವೇಳೆ ದೃಡಪಟ್ಟಿದೆ. ಆರೋಪಿಯಿಂದ ಬಳಸುತ್ತಿದ ನಕಲಿ ಸೇನಾ ಸಮವಸ್ತ್ರ, ಎಲೆಕ್ಟ್ರಾನಿಕ್ ಉಪಕರಣಗಳು ಹಾಗು ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
2016ರಿಂದಲೇ ಈತ ಐಎಸ್ಐ ಸಂಪರ್ಕ ಹೊಂದಿದ್ದ ಇತ್ತೀಚಿಗೆ ದೆಹಲಿ, ರಾಜಸ್ಥಾನದಲ್ಲಿ ಬಂಧನಕೊಳಗಾದ ನಕಲಿ ಮಿಲಿಟರಿ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ. ಸೇನೆಗೆ ಸಂಬಂಧಿಸಿದ ಮಾಹಿತಿ ರವಾನಿಸಿದಾಗಲೆಲ ಈತನಿಗೆ ಆನ್ಲೈನ್ ಮೂಲಕ ಹಣ ಸಂದಾಯವಾಗುತ್ತಿತು. ಇದೇ ರೀತಿ, ಲಕ್ಷಾಂತರ ರೂಪಾಯಿ ಹಣ ಪಡೆದಿರಬಹುದು ಎಂಬ ಅನುಮಾನ ಗಾಢವಾಗಿ ಆವರಿಸಿದೆ.
ಪಾಕಿಸ್ತಾನದ ಐಎಸ್ಐ ಏಜೆಂಟಗಳು ಯುವತಿ ಹೆಸರಿನಲ್ಲಿ ನಕಲಿ ಪೇಸ್ಬುಕ್ ಖಾತೆ ತೆರೆದು ಆರೋಪಿಯನ್ನು ತಮ್ಮ ಬಲೆಗೆ ಕೆಡವಿದ್ದಾರೆ ಎಂದು ತಿಳಿದು ಬಂದಿದೆ. ನಕಲಿ ಸೇನಾ ಸಮವಸ್ತ್ರ ಧರಿಸಿ ವಿವಿದೆಡೆ ಪೋಟೋ ತೆಗೆದು ಫೇಸ್ಬುಕ್ನಲ್ಲಿ ಹಾಕುತಿದದ್ದನ್ನು ಗಮನಿಸಿದ ಐಎಸ್ಐ ಏಜೆಂಟಗಳು ಭಾರತದ ನಂಬರ್ನಲ್ಲಿ ನೇಹಾ ಉರುಫ್ ಪೂಜಾಜಿ ಎಂಬ ಹೆಸರಿನಲ್ಲಿ ಪಾಕಿಸ್ತಾನದ ಐಪಿ ವಿಳಾಸದಲ್ಲಿ ತೆರೆಯಲಾಗಿದೆ. ಈ ಖಾತೆಯ ಮೂಲಕ ಜಿತೇಂದರ್ಗೆ ಫ್ರೆಂಡ್ ಕಳುಹಿಸಿದ ಐಎಸ್ಐ ಏಜೆಂಟ್ಗಳು ನೈಜವಾಗಿ ಯುವತಿಯೇ ಇರಬಹುದು ಎಂದು ನಂಬಿ ಜಿತೇಂದರ್ ರಿಕ್ವೆಸ್ಟನ್ನು ಆಕ್ಸೆಪ್ಟ್ ಮಾಡಿ ಸ್ನೇಹ ಬೆಳೆಸಿದ್ದ.
ರಾಜಸ್ಥಾನದ ಬಾರ್ಮೆರ್ ಮಿಲಿಟರಿ ಸ್ಟೇಷನ್, ಪೋಲೆರಾಮ್ ಫೈರಿಂಗ್ ರೇಂಜ್, ಬದೇಮೇರ್ ರೈಲ್ವೇ ಕಂಟೋನ್ಮೆಂಟ್ ಪ್ರದೇಶ, ಟೋನೋಟೆ ಮಿಲಿಟರಿ ಪ್ರದೇಶ, ದೆಹಲಿಯ ರಾಜಪಥಮ್ ರೈಲ್ವೆ ರೆಜಿಮೆಂಟ್ ಸೇರಿ ದೇಶದ ಪ್ರಮುಖ 6 ಮಿಲಿಟರಿ ಪ್ರದೇಶಗಳ ಪೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ಡಿಲೀಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಂಟಲಿಜೆನ್ಸ್ ಅಧಿಕಾರಿಗಳು ಡಿಲೀಟ್ ಮಾಡಿರುವ ಮೆಸೇಜಗಳನ್ನು ರಿಟ್ರೈವ್ ಮಾಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಸೇನಾ ನೆಲೆಗಳಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಇಂಟಲಿಜೆನ್ಸ್ ಬ್ಯೂರೋ(IB)ಗೆ ಈ ಬಗ್ಗೆ ಸುಳಿವು ಸಿಕ್ಕಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಜಿತೇಂದರ್ ಬಗ್ಗೆ ಮಾಹಿತಿ ದೊರೆತಿದೆ. ಆರೋಪಿ ಬೆಂಗಳೂರಿನಲ್ಲಿ ನೆಲೆಸಿರುವುದು ಗೊತ್ತಾಗಿತ್ತು ಮಿಲಿಟರಿ ಇಂಟಲಿಜೆನ್ಸ್ ಮಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಮತ್ತು ಗುಪ್ತಚರದ ದಕ್ಷಿಣ ಕಾಮಾಂಡೋ ತಂಡ ಜಂಟಿಯಾಗಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬೆಂಗಳೂರಿನ ಕಾಟನ್ಪೇಟೇಯ ಜಾಲಿ ಮೊಹಲ್ಲದಲ್ಲಿ ಸೋಮವಾರ ಬಂಧಿಸಿ ತ್ರೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು 12ದಿನಗಳ ಕಾಲ ಸಿಸಿಬಿ ಆರೋಪಿಯನ್ನು ತನ್ನ ವಶಕ್ಕೆ ಪಡೆದಿದೆ.