ಭಾರತದ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯನ್ನು (Mehul choksi) ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಲ್ಜಿಯಂನಲ್ಲಿ (Belgium) ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿದೆ.ಈತನನ್ನು ಭಾರತಕ್ಕೆ ಗಡೀಪಾರು ಮಾಡುವ ಸಲುವಾಗಿ ಈ ಬಂಧನ ಪ್ರಕ್ರಿಯೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಂಧನದ ನಂತರ ಸದ್ಯದಲ್ಲೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು.

ಭಾರತದ ಸಿಬಿಐ (CBI), ಇ.ಡಿ. (ED) ಅಧಿಕಾರಿಗಳ ಮನವಿ ಮೇರೆಗೆ ಮೆಹುಲ್ ಚೋಕ್ಸಿಯನ್ನು ಬಂಧನ ಮಾಡಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ (Punjab national bank) 13,500 ಕೋಟಿ ರೂಪಾಯಿ ವಂಚಿಸಿದ್ದ ಕೇಸ್ ನ ಪ್ರಮುಖ ಆರೋಪಿಈ ಮೆಹುಲ್ ಚೋಕ್ಸಿ. ಭಾರತದ ಕೋರ್ಟ್ ಗಳು ಮೆಹುಲ್ ಚೋಕ್ಸಿ ವಿರುದ್ದ ಜಾಮೀನು ರಹಿತ ಬಂಧನ ವಾರಂಟ್ ಕೂಡ ಹೊರಡಿಸಿದ್ದವು.