ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿಯೇ ಬೀಡು ಬಿಟ್ಟು, ಶತಾಯಗತಾಯ ಹೈಕಮಾಂಡ್(High Command) ನಾಯಕರನ್ನು ಭೇಟಿಯಾಗಲೇಬೇಕೆಂದು ಪಣತೊಟ್ಟಿದ್ದ ಮಾಜಿ ಸಚಿವ(Former Minister) ವಿ. ಸೋಮಣ್ಣ(V Somanna) ಕೊನೆಗೂ, ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಇಂದು ಬೆಳಿಗ್ಗೆಯೇ ಬಿಜೆಪಿ(BJP India) ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ(JP Nadda), ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Sha) ರನ್ನು ಭೇಟಿಯಾಗಿರುವ ವಿ. ಸೋಮಣ್ಣಗೆ ಹೈಕಮಾಂಡ್ ನಾಯಕರು ಆತ್ಮಸ್ಥೈರ್ಯವನ್ನು ತುಂಬಿಸಿ ಕಳುಹಿಸಿದ್ದಾರೆ.

ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿ.ಸೋಮಣ್ಣ, ಹೈಕಮಾಂಡ್ ನಾಯಕರ ಭೇಟಿ ಬಹಳ ಸಂತಸ ತಂದಿದೆ. ನನಗೆ ಜವಾಬ್ದಾರಿ ನೀಡಿ ಎಂಬ ವಿಚಾರವನ್ನು ಅವರ ಮುಂದೆ ಪ್ರಸ್ತಾಪಿಸಿದ್ದೇನೆ. ಅವರು ಕೂಡ ಬಹಳ ಸಂತೋಷ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆ ಬಗ್ಗೆ ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ ಎಂದಿದ್ದಾರೆ. ಇನ್ನು ನೀವು ಯಾವಾಗಲೂ ಮುಖ್ಯವಾಹಿನಿಯಲ್ಲಿ ಇರಬೇಕೆಂದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.