ಮೋದಿಯವರ ಹತ್ತು ವರ್ಷಗಳ ಸುದೀರ್ಘ ಹಾಗು ಪ್ರಶ್ನಾತೀತ ಆಡಳಿತವು ಯಶಸ್ವಿಯಾಗಿದ್ದೆ ಭಾರತೀಯ ಮಾಧ್ಯಮಗಳನ್ನು ಖರೀಧಿಸುವ ಮತ್ತು ನಿಯಂತ್ರಿಸುವ ಮೂಲಕ ಎಂದರೆ ತಪ್ಪಾಗಲಿಕ್ಕಿಲ್ಲ. ಇಡೀ ಮಾಧ್ಯಮ ವ್ಯವಸ್ಥೆಯು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಗ್ಯೂ ತಮ್ಮ ಆಡಳಿತದುದ್ದಕ್ಕೂ ಮೋದಿ ಮಹಾಷಯರು ಒಂದೇ ಒಂದು ಬಹಿರಂಗ ಪತ್ರಿಕಾಗೋಷ್ಟಿಯನ್ನು ಮಾಡುವ ಎದೆಗಾರಿಕೆ ಪ್ರದರ್ಶಿಸಲಿಲ್ಲ. ಇದು ಅವರಿಗೆ ಪ್ರಾಮಾಣಿಕ ಮಾಧ್ಯಮದ ಬಗೆಗಿರುವ ಭಯವನ್ನು ಸಾಂಕೇತಿಸುತ್ತದೆ. ಕಳೆದ ಹತ್ತು ವರ್ಷಗಳಿಂದ ಪ್ರಾಮಾಣಿಕ ಮಾಧ್ಯಮಗಳು ಹಾಗು ಪತ್ರಕರ್ತರ ಮೇಲಿನ ದಾಳಿಗಳು ಸರಕಾರಿ ಯಂತ್ರ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿಲ್ಲ ಎನ್ನುವುದನ್ನು ಒತ್ತಿ ಹೇಳುತ್ತದೆ. ಇದೇ ಅಕ್ಟೋಬರ್ ತಿಂಗಳು ಮಾಧ್ಯಮ ಸಂಸ್ಥೆಯೊಂದರ ಮೇಲಿನ ಮೋದಿ ಸರಕಾರದ ದಾಳಿಯಲ್ಲಿ ಪತ್ರಕರ್ತರಿಗೆ ಸೇರಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಸಕಾರಣ ನೀಡದೆ ಕಸಿದುಕೊಂಡಿರುವುದು ಮುಕ್ತ ಮಾಧ್ಯಮಕ್ಕೆ ಕೆಟ್ಟ ಕಾಲ ಹಾಗು ಒಟ್ಟಾರೆ ಜನತಂತ್ರಕ್ಕೆ ಅಪಾಯದ ಕಾಲ ಎನ್ನಬೇಕಿದೆ.
ಇತ್ತೀಚಿನ ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಆ ಮಾಧ್ಯಮ ಪೋರ್ಟಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿರುವುದು ಮಾಧ್ಯಮ ಸ್ವತಂತ್ರ ಮೇಲೆ ಮೋದಿ ಸರ್ಕಾರದ ಭವಪೂರಿತ ದಾಳಿಯು ಅವರ ಸರ್ವಾಧಿಕಾರಿ ಮನೋಭಾವವನ್ನು ಎತ್ತಿಹಿಡಿಯುತ್ತದೆ. ಇದೇ ಅಕ್ಟೋಬರ್ ೩ ರ ಮುಂಜಾನೆ ಪತ್ರಕರ್ತರ ಮನೆಗಳ ಮೇಲಿನ ನಾಟಕೀಯ ದಾಳಿಗಳು ಮತ್ತು ಅವರ ಬಂಧನಗಳು ಮೋದಿ ಆಡಳಿತದ ಸತ್ಯವಿರೋಧಿ ನಿಲುವನ್ನು ಬಹಿರಂಗಗೊಳಿಸಿದೆ. ದಾಳಿಯಲ್ಲಿ ಪತ್ರಕರ್ತರ ಹತ್ತಾರು ಎಲೆಕ್ಟ್ರಾನಿಕ್ ಸಾಧನಗಳುˌ ಲ್ಯಾಪ್‌ಟಾಪ್‌ಗಳು ಮತ್ತು ಟೆಲಿಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಾಳಿಯು ಮೋದಿ ಆಡಳಿತಕ್ಕೆ ಎಷ್ಟೊಂದು ಭಯ ಹುಟ್ಟಿಸಿತ್ತೆಂದರೆ ದಾಳಿಗೆ ಗುರಿಯಾದವರಲ್ಲಿ ಈ ಸುದ್ದಿ ಪೋರ್ಟಲ್ಗೆ ಸಾಂದರ್ಭಿಕ ಕೊಡುಗೆದಾರುˌ ಕ್ಷಣಿಕ ಸಂಪರ್ಕವನ್ನು ಹೊಂದಿರುವ ಕೆಲವು ಬರಹಗಾರರು ಸೇರಿದ್ದಾರೆ.
ನ್ಯೂಸ್‌ಕ್ಲಿಕ್‌ನೊಂದಿಗೆ ಸಂಪರ್ಕವಿರುವ ಲೇಖಕರು, ಪತ್ರಕರ್ತರು, ವಿಡಂಬನಕಾರರು, ಇತಿಹಾಸಕಾರರು ಮತ್ತು ವಿಜ್ಞಾನಿಗಳೆಲ್ಲರಿಗೆ ಭವಯನ್ನು ಹುಟ್ಟಿಸಲು ಈ ದಾಳಿಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ದಾಳಿಯ ಸಮಯದಲ್ಲಿ ವಶಪಡಿಸಿಕೊಳ್ಳಲಾದ ಸಾಧನˌ ಸಲಕರಣೆಗಳಿಗೆ ಸರಿಯಾದ ಸೀಜರ್ ಮೆಮೊಗಳು ಅಥವಾ ಹ್ಯಾಶ್ ಮೌಲ್ಯಗಳನ್ನು ಕೂಡ ನೀಡಲಾಗಿಲ್ಲ ಎನ್ನುವು ಸಂಗತಿಯು ಮೋದಿ ಸರಕಾರದ ಅಧಿಕಾರದ ಕ್ರೂರ ಪ್ರಯೋಗ ಎನ್ನಬೇಕಿದೆ. ಈ ದಾಳಿಯು ಮೋದಿ ಸರಕಾರದ ಸರ್ವಾಧಿಕಾರ ಮತ್ತು ಮಾಧ್ಯಮಗಳ ಮೇಲಿನ ಬಿಗಿ ನಿಯಂತ್ರಣದ ಪ್ರದರ್ಶನವಾಗಿತ್ತು. ಅಂತಿಮವಾಗಿ ಈ ಸುದ್ದಿ ಪೋರ್ಟಲ್‌ನ ಕಚೇರಿಗೆ ಬೀಗ ಹಾಕಲಾಯಿತು. ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕವು ಒಟ್ಟು ೪೬ ಜನರನ್ನು ವಿಚಾರಣೆಗೊಳಪಡಿಸಿದೆ. ಮೋದಿ ಆಡಳಿತವು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಅವಧಿಯಾಗಿದೆ.

ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕವು ಭಾರತವನ್ನು ೧೬೧ ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ೨೦೧೫ ರಿಂದ ಇದರ ಪತನವು ಅಗಾಧ ಮತ್ತು ತೀಕ್ಷ್ಣವಾಗಿದೆ. ಮೋದಿ ಆಡಳಿತದಲ್ಲಿ ತಮ್ಮ ಸೈದ್ಧಾಂತಿಕ ವಿರೋಧಿಗಳ ಇಂಟರ್ನೆಟ್ ಸ್ಥಗಿತಗೊಳಿಸುವಲ್ಲಿ ದೇಶ ಜಾಗತಿಕ ಮಟ್ಟದಲ್ಲಿ ಕುಪ್ರಸಿದ್ದವಾಗಿದೆ. ಆದರೂ ಮೋದಿಯವರು ಭಾರತ ‘ಪ್ರಜಾಪ್ರಭುತ್ವದ ತಾಯಿ’ ಎನ್ನುತ್ತಾರೆ. ಡಿಜಿಟಲ್ ಮತ್ತು ಸ್ವತಂತ್ರ ಮಾಧ್ಯಮಗಳನ್ನು ಬಿಗಿಯಾಗಿ ನಿಯಂತ್ರಿಸುವ ಮೋದಿಯವರ ಪ್ರಯತ್ನ ನಿರಂತರವಾಗಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿ ತಮ್ಮ ಆಡಳಿತದಲ್ಲಿನ ಅಪಾರದರ್ಶಕತೆಯನ್ನು ಪ್ರದರ್ಶಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಮೇಲೆ ಮಾರಣಾಂತಿಕ ಪರಿಣಾಮವನ್ನು ಬೀರಿದೆ. ಮೋದಿ ಆಡಳಿತದಲ್ಲಿ, ಸರ್ವೋಚ್ಛ ನ್ಯಾಯಾಲಯದ ಆತಂಕದ ಹೊರತಾಗಿಯೂ ಟಿವಿ ನ್ಯೂಸ್ ಚಾನೆಲ್‌ಗಳ
ದ್ವೇಷ ಭಾಷಣಗಳು ಸಾರ್ವಜನಿಕ ಕ್ಷೇತ್ರವನ್ನು ವಿಷಪೂರಿತಗೊಳಿಸಿ ಸಮಾಜದಲ್ಲಿ ಹಿಂಸೆಯನ್ನು ಸಕ್ರಿಯಗೊಳಿಸಿವೆ.
~ಡಾ. ಜೆ ಎಸ್ ಪಾಟೀಲ.