ಮುಂಬೈ: ನಟಿ ಆಲಿಯಾ ಭಟ್ ಅವರು ತಮ್ಮ ಮನೆಯಲ್ಲಿರುವ ಚಿತ್ರಗಳನ್ನು ಅನುಮತಿ ಇಲ್ಲದೆ ತೆಗೆದು ಪ್ರಕಟಿಸುವ ಮೂಲಕ economictimes ವಿವಾದ ಸೃಷ್ಟಿಸಿದೆ. ತನ್ನ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಲಿಯಾ ಭಟ್ ಮಾಧ್ಯಮ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿರುವ ಆಲಿಯಾ, ತಾನು ತನ್ನ ಲಿವಿಂಗ್ ರೂಮ್‌ನಲ್ಲಿದ್ದಾಗ ಪಕ್ಕದ ಕಟ್ಟಡದ ಟೆರೇಸ್‌ನಲ್ಲಿ ಇಬ್ಬರು ವ್ಯಕ್ತಿಗಳು ತನ್ನತ್ತ ಕ್ಯಾಮೆರಾವನ್ನು ಇಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
“ಯಾವ ಜಗತ್ತಿನಲ್ಲಿ ಇದನ್ನು ಸರಿ (ಎಂದು ಹೇಳಬಹುದು) ಅಥವಾ ಒಪ್ಪಬಹುದು?. ಇದು ಒಬ್ಬರ ಗೌಪ್ಯತೆಯ ಮೇಲಿನ ಸಂಪೂರ್ಣ ಆಕ್ರಮಣವಾಗಿದೆ! ನೀವು ದಾಟಬಾರದ ಮಿತಿ ಇದೆ. ಇಂದು ಎಲ್ಲಾ ಮಿತಿಯನ್ನೂ ದಾಟಲಾಗಿದೆ” ಎಂದು ಆಲಿಯಾ ಕಿಡಿ ಕಾರಿದ್ದಾರೆ.
ಭಟ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮುಂಬೈ ಪೊಲೀಸರನ್ನೂ ಉಲ್ಲೇಖಿಸಿದ್ದು, ಮುಂಬೈ ಪೊಲೀಸರು ಭಟ್ ಅವರನ್ನು “ಈ ವಿಷಯದಲ್ಲಿ ದೂರು ದಾಖಲಿಸಲು” ಕೇಳಿದ್ದಾರೆ ಎಂದು newslaundry ವರದಿ ಮಾಡಿದೆ.