ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಆಯ್ಕೆಯಾಗಿದ್ದಾರೆ. ಮತ್ತು ಈ ಕುರಿತು ಆದೇಶ ಪತ್ರವನ್ನು ಸಹ ಹೊರಡಿಸಲಾಗಿದೆ.
ಈ ಕುರಿತು ಮಾತನಾಡಿದ ಪಾಟೀಲ್ ನನನ್ನು ನಂಬಿ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಕಾಂಗ್ರೆಸ್ ವರಿಷ್ಠರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಿಂದಿನಂತೆ ಜನಪರ ಆಡಳಿತವನ್ನು ನೀಡುತ್ತೇವೆ ಮತ್ತು ವರಿಷ್ಠರ ಭರವಸೆಗೆ ತಕ್ಕಂತೆ ಕೆಲಸ ಮಾಡುತ್ತೇನೆ 2023ರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಈ ವೇಳೆ ಹೇಳಿದ್ದಾರೆ.
ಮುಂದುವರೆದು, ಇಲ್ಲಿ ಜಾತಿ ಪ್ರಶ್ನೆ ಉದಭವಿಸಲ್ಲ ಇದೊಂದು ಚಾಲೆಂಜಿಂಜ್ ಜಾಬ್ ಟೀಂ ವರ್ಕ್ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಮತ್ತು ಯಾವುದೇ ಬಣಗಳಿಲ್ಲ ಇರುವುದು ಒಂದೇ ಬಣ ಅದು ರಾಜ್ಯ ಕಾಂಗ್ರೆಸ್ ಬಣ ಎಂದು ಹೇಳಿದ್ದಾರೆ.
