ಇಂದು ನಾಡಿನೆಲ್ಲೆಡೆ ರಾಮನವಮಿಯ (Ram navami) ಸಂಭ್ರಮ ಮನೆ ಮಾಡಿದೆ. ಶ್ರೀ ರಾಮಚಂದ್ರ ಆದರ್ಶಗಳು ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ಹೀಗಾಗಿ ರಾಜ್ಯದ ಹಲವೆಡೆ ಪ್ರಭು ಶ್ರೀರಾಮ ಚಂದ್ರರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ (Cm siddaramaiah) ಹಿಂದೂಗಳಿಗೆ ರಾಮನವಮಿಯ ಶುಭಕೋರಿದ್ದಾರೆ. ಪ್ರಭು ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ – ಮಮತೆ ಮುಂತಾದ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ ಎಂದು ಸಿದ್ದು ಟ್ವೀಟ್ ಮಾಡಿದ್ದಾರೆ.

ಪಾನಕ – ಕೋಸಂಬರಿಯ ಜೊತೆ ಸ್ನೇಹ – ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಎಲ್ಲೆಡೆ ಬೆಳಗಲಿ ಎಂದು ಹಾರೈಸುತ್ತೇನೆ.ಸರ್ವರಿಗೂ ರಾಮನವಮಿಯ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

