ತಾಯಂದಿರ ಮರಣ ಪ್ರಮಾಣದಲ್ಲಿ (MMR) ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಕರ್ನಾಟಕ ಅತಿ ಕೆಟ್ಟ ದಾಖಲೆಯನ್ನು ಹೊಂದಿರುವುದಾಗಿ ಸಮೀಕ್ಷೆ ಮೂಲಕ ತಿಳಿದು ಬಂದಿದೆ.
ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಹೆರಿಗೆ ಸಮಯದಲ್ಲಿ ಸಂಭವಿಸುವ ಸಾವುಗಳನ್ನು ತಡೆಗಟ್ಟುವಲ್ಲಿ ಕರ್ನಾಟಕ ಪ್ರಗತಿ ಸಾಧಿಸಿದೆ ಎಂದು ವರದಿ ಹೇಳಿದೆ.
ಮಾತೃ ಮರಣ ವಿಶೇಷ ಬುಲೆಟಿನ್ ಪ್ರಕಾರ ಭಾರತದಲ್ಲಿ 2017-19ರವರೆಗೆ ಕರ್ನಾಟಕದಲ್ಲಿ ಪ್ರತಿ ಒಂದು ಲಕ್ಷ ತಾಯಂದಿರ ಪೈಕಿ 83 ಜನ ಸಾವನಪ್ಪುತ್ತಿದ್ದಾರೆ, ತಮಿಳುನಾಡು, ಆಂಧ್ರಪ್ರದೇಶ(58),ತೆಲಂಗಾಣ (56). ಕೇರಳ (30) ನಂತರದ ಸ್ಥಾನಗಳಲ್ಲಿವೆ.
ಈ ಕುರಿತು ಮಾತನಾಡಿರುವ ತಜ್ಞರ ಸಮಿತಿಯೊಂದು, ಹೆರಿಗೆ ಸಮಯದಲ್ಲಿ ಸಂಭವಿಸುವ ಸಾವುಗಳನ್ನು ತಡೆಗಟ್ಟುವಲ್ಲಿ ಕರ್ನಾಟಕ ಗಣನೀಯ ಪ್ರಗತಿಯನ್ನು ಸಾಧಿಸಿದೆ 2030ರ ವೇಳೆಗೆ ಸಾವಿನ ಸಂಖ್ಯೆಯನ್ನು 70ಕ್ಕಿಂತ ಕಡಿಮೆಗೆ ಇಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕಲಬುರಗಿ ಮೂಲದ ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ 2004ರಿಂದ ಈಚೆಗೆ ಬಂದಿರುವ ಸರ್ಕಾರಗಳು ತಾಯಂದಿರು ಹಾಗೂ ಹಾಲುಣಸುವ ತಾಯಂದಿರನ್ನು ದೃಷ್ಟಿಯಲ್ಲಿಟ್ಟುಕೊಂಡು ಘೋಷಿಸಿರುವ ಯೋಜನೆಗಳನ್ನು ಉತ್ತಮಗೊಳಿಸಬೇಕು ನಮ್ಮ ಗುರಿ 70 ಆಗಿರಬಾರದು ಕೇರಳಕ್ಕಿಂತ ಕಡಿಮೆ ಅಂಕಿಅಂಶವನ್ನು ನಾವು ಸಾಧಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ಪ್ರಸೂತಿ ಹಾಗೂ ಸ್ತ್ರೀ ರೋಗ ಶಾಸ್ತ್ರ ಸಂಘದ ಅಧ್ಯಕ್ಷೆ, ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಕಸ್ತೂರಿ ದೋಣಿಮಠ ಮಾತನಾಡಿ MMR ಅಂಕಿಅಂಶಗಳಲ್ಲಿ ಏರಿಕೆಯಲ್ಲಿ ಸಾಂಸ್ಥಿಕ ಹೆರಿಗೆಯಲ್ಲಿನ ಹೆಚ್ಚಳವೇ ಕಾರಣ ಎಂದು ಹೇಳಿದ್ದಾರೆ.
National Family Health Survey of Indiaದ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ 97% ಜನನಗಳು ಸಾಂಸ್ಥಿಕ ಜನನಗಳಾಗಿವೆ. ಅದರಲ್ಲಿ93.8% ವೈದ್ಯರು, ದಾದಿಯರು ಹಾಗೂ ಪ್ರಸೂತಿ ತಜ್ಞರ ಸಹಾಯದಿಂದ ಆಗುತ್ತದೆ ಎಂದು ತಿಳಿದು ಬಂದಿದೆ.
ಮುಂದುವರೆದು, ರಾಜ್ಯದಲ್ಲಿ 15-49 ವರ್ಷದೊಳಗಿನ ಸುಮಾರು 45.7ರಷ್ಟು ಮಹಿಳೆಯರು ರಕ್ತಹೀನತೆ, ಅಪೌಷ್ಠಿಕತೆಯಿಂದ ಅಧಿಕ ರಕ್ತದೊತ್ತಡದಿಂದಾಗಿ ಬಳಲುತ್ತಿದ್ದಾರೆ. 44.7% ಗರ್ಭಿಣಿಯರು ಕಬ್ಬಿಣ ಪೋಲಿಕ್ ಅಂಶವಿರುವ ಮಾತ್ರೆಗಳನ್ನು ಕನಿಷ್ಠ 100 ದಿನಗಳವರೆಗೆ ಸೇವಿಸುತ್ತಾರೆ ಎಂದು ಅಮೀಕ್ಷೆಯಲ್ಲಿ ತಿಳಿದು ಬಂದಿದೆ.
ಕೆಲವೊಮ್ಮೆ ಅನಿಯಮಿತ ತಪಾಸಣೆ ಹಾಗೂ ವೈದ್ಯರ ಸಲಹೆಯನ್ನು ಪಾಲಿಸದಿರುವುದು ಗರ್ಭಿಣಿಯರ ಸಾವಿಗೆ ಕಾರಣವಾಗುತ್ತದೆ. ಗ್ರಾಮೀಣ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ PHC ಮತ್ತು ಮಾಧ್ಯಮಿಕ ಆಸ್ಪತ್ರೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮೂಲಸೌಕರ್ಯ ಹೊಂದಿವೆ. ಆದರೆ, ಅಗತ್ಯವಿರುವ ಮಾನವ ಸಂಪನ್ಮೂಲ ಪರಿಣಿತಿಯನ್ನು ಹೊಂದಿರುವುದಿಲ್ಲ ಇದು ಹೆರಿಗೆಯ ಸಮಯದಲ್ಲಿ ಸಾವಿಗೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.