• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಮ್ಯಾಸಿವ್ ಸ್ಟಾರ್ ನಟ ರಾಜವರ್ಧನ್ ನಿರ್ಮಾಣ ಸಂಸ್ಥೆ ಹಾಗೂ ಚಿತ್ರದ ಟೈಟಲ್ ಬಿಡುಗಡೆ.

ಪ್ರತಿಧ್ವನಿ by ಪ್ರತಿಧ್ವನಿ
May 7, 2025
in ಸಿನಿಮಾ
0
ಮ್ಯಾಸಿವ್ ಸ್ಟಾರ್ ನಟ ರಾಜವರ್ಧನ್ ನಿರ್ಮಾಣ ಸಂಸ್ಥೆ ಹಾಗೂ ಚಿತ್ರದ ಟೈಟಲ್ ಬಿಡುಗಡೆ.
Share on WhatsAppShare on FacebookShare on Telegram

Barn Swallow company ಪ್ರೊಡಕ್ಷನ್ ಹೌಸ್ ನಲ್ಲಿ “ಜಾವಾ” ಟೈಟಲ್ Revil.

ADVERTISEMENT

ಚಂದನವನದ ಹಿರಿಯ ನಟ ಡಿಂಗ್ರಿ ನಾಗರಾಜ್ ರವರ ಸುಪುತ್ರ ನಟ ರಾಜವರ್ಧನ್ ಈಗ ನಿರ್ಮಾಪಕರಾಗಿ ಹೆಜ್ಜೆ ಇಡುತ್ತಿದ್ದಾರೆ. ನಗರದ ಜಿಟಿ ಮಾಲ್ ನಲ್ಲಿರುವ MMB Legacy ಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಸಾಲು ಸಾಲಾಗಿ ಚಿತ್ರ ಮಾಡಲು ಸಿದ್ಧರಾಗಿದ್ದು , “ಜಾವಾ” ಎಂಬ ಚಿತ್ರದ ಟೈಟಲ್ ರಿವಿಲ್ ಮಾಡಲಾಯಿತು. ಈ ಚಿತ್ರವನ್ನು ಪತ್ರಕರ್ತ ಹಾಗೂ ಬರಹಗಾರರಾದ ದೇವಾ ಚಕ್ರವರ್ತಿ ನಿರ್ದೇಶನ ಮಾಡ್ತಿದ್ದು, ನಟರಾಗಿ ಮ್ಯಾಸಿವ್ ಹೀರೋ ರಾಜವರ್ಧನ್ ನಾಯಕನಾಗಿ ಅಭಿಸುತ್ತಿದ್ದು , ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು.

ವಿಡಿಯೋದಲ್ಲಿ ಸಿದ್ದರಾಮಯ್ಯಗೆ ನಿಂದನೆ: ಮೈಸೂರು ಪೊಲೀಸ್ ಪೇದೆ ಬಂಧನ! #pratidhvani

ಈ ಚಿತ್ರದ ನಟ ಹಾಗೂ ನಿರ್ಮಾಪಕ ರಾಜವರ್ಧನ್ ಮಾತನಾಡುತ್ತಾ ನಮ್ಮದು ಚಿತ್ರೋದ್ಯಮದ ಕುಟುಂಬ, ನಮ್ಮ ತಂದೆ ಡಿಂಗ್ರಿ ನಾಗರಾಜ್ 40 ವರ್ಷಗಳಿಂದ ಚಿತ್ರಗಳಲ್ಲಿ ನಟಿಸಿ , ಸೀರಿಯಲ್ , ಸಿನಿಮಾಗಳನ್ನ ನಿರ್ಮಿಸಿ , ನಿರ್ದೇಶಿಸಿ ಪ್ರೇಕ್ಷಕರನ್ನ ರಂಜಿಸುತ್ತ ಮನ ಗೆದ್ದಿದ್ದಾರೆ. ನಾನು ಕೂಡ ಚಿತ್ರರಂಗದಲ್ಲಿ ನಟನಾಗಿ ಬಿಚ್ಚುಗತ್ತಿ , ಪ್ರಣಯಂ , ಹಿರಣ್ಯ , ಗಜರಾಮ ಸೇರಿದಂತೆ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸುತ್ತ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಸಾಗಿದ್ದೇನೆ. ಸುಮಾರು ಎರಡು ವರ್ಷಗಳ ಹಿಂದೆ ಪೂರ್ವ ತಯಾರಿ ಮಾಡಿಕೊಂಡು ನನ್ನದೇ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಜಾವಾ ಎಂಬ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದೇನೆ. ಇಂದು ವಿಶೇಷವಾಗಿ ನಮ್ಮ ಸಂಸ್ಥೆಯ ಬ್ಯಾನರ್ ಹಾಗೂ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದೇವೆ. ನಮ್ಮ ಚಿತ್ರದ ನಿರ್ದೇಶಕ ದೇವ ಚಕ್ರವರ್ತಿ ನನ್ನ ಆರಂಭದ ದಿನಗಳಿಂದಲೂ ಆತ್ಮೀಯರು , ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಕಥೆ ಆಯ್ಕೆ ವಿಚಾರದಾಗ್ಲಿ , ನನ್ನ ಬೆಳವಣಿಗೆಗಾಗಿ ಬಹಳಷ್ಟು ಸಹಕಾರಿಯಾಗಿ ನಿಂತಿದ್ದಾರೆ. ಈಗ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ ಕುತೂಹಲಕಾರಿಯಾಗಿದ್ದು, 80ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ನಡೆದಂತಹ ಘಟನೆ ಚಿತ್ರೋದ್ಯಮದ ಮಂದಿಗೆ ಹೆಚ್ಚು ಈ ವಿಚಾರ ಗೊತ್ತಿಲ್ಲ, ಇಂತಹ ಇಂಟರೆಸ್ಟಿಂಗ್ ಕಥೆಯನ್ನು ಪೂರ್ವ ತಯಾರಿ ಮಾಡಿಕೊಂಡು ಚಿತ್ರವನ್ನು ಆರಂಭಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಈಗಾಗಲೇ ನಾಲ್ಕು ಕಥೆಗಳಿದೆ ಬೇರೆ ಬೇರೆ ಕಲಾವಿದರಿಗೂ ಅವಕಾಶ ನೀಡುವ ಆಲೋಚನೆ ಇದೆ. ಈ ನಮ್ಮ ನೂತನ ಸಂಸ್ಥೆಗೆ ನಿಮ್ಮೆಲ್ಲರ ಪ್ರೀತಿ , ಸಹಕಾರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.


ನಾಯಕಿಯಾಗಿ ಅಭಿನಯಿಸುತ್ತಿರುವ ರಾಗಿಣಿ ದ್ವಿವೇದಿ ಮಾತನಾಡುತ್ತಾ ನಿರ್ದೇಶಕರು ಬಹಳಷ್ಟು ಸಿದ್ಧತೆ ಮಾಡಿಕೊಂಡು ಬಂದು ನನಗೆ ಮೊದಲು ಒಂದು ಕಥೆ ಹೇಳಿದರು, ತದನಂತರ ಈ ಕಥೆಯನ್ನ ಹೇಳಿದ ರೀತಿ ಇಷ್ಟವಾಯಿತು. ಬಹಳ ಚಾಲೆಂಜಿಂಗ್ ಇರುವಂತಹ ಪಾತ್ರ ನನ್ನದಾಗಿದೆ. ಸಿನಿಮಾ ನಟಿಯ ಬದುಕಿನ ಸುತ್ತ ಸಾಗುವ ಕಥೆ ಇದಾಗಿದೆ. ಹಾಗೆಯೇ ನಟ ರಾಜವರ್ಧನ್ ನನ್ನ ಆತ್ಮೀಯ ಗೆಳೆಯ, ಅವರ ನಿರ್ಮಾಣದ ಸಂಸ್ಥೆಯ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ಇದೆ. ನಮ್ಮ ಚಿತ್ರತಂಡಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ , ಹಾಗೆಯೇ ನನ್ನ ಹುಟ್ಟುಹಬ್ಬಕ್ಕೆ ಮತ್ತೊಂದು ವಿಶೇಷ ಅನೌನ್ಸ್ಮೆಂಟ್ ನೀಡುತ್ತೇನೆ ಎಂದು ಹೇಳಿದರು.

ಇನ್ನು ಈ ಚಿತ್ರದ ನಿರ್ದೇಶಕ ದೇವ ಚಕ್ರವರ್ತಿ ಮಾತನಾಡುತ್ತಾ ನಾನು ಒಬ್ಬ ಪತ್ರಕರ್ತನಾಗಿ , ಸಾಹಿತಿ , ಬರಹಗಾರ , ಕಲಾವಿದನಾಗಿ ಚಿತ್ರೋದ್ಯಮದಲ್ಲಿ ನನ್ನನ್ನ ನಾನು ಬಹಳಷ್ಟು ತೊಡಗಿಸಿಕೊಂಡು ಸಾಗಿದದೇನೆ. ಹಾಗೆಯೇ ಒಂದಷ್ಟು ಏರುಪೇರುಗಳ ಜೊತೆ ಚಿತ್ರೋದ್ಯಮದ ಅನುಭವವು ಆಗಿದೆ. ಬಹಳಷ್ಟು ಕಥೆಗಳನ್ನು ಸಿದ್ಧ ಮಾಡಿಕೊಂಡು ,ಒಂದು ಸೂಕ್ತ ಸಮಯಕ್ಕಾಗಿ ಕಾಯುತಿದ್ದೆ. ಈಗ ಅದರ ಫಲವಾಗಿ ಒಂದು ನೈಜ ಘಟನೆಗಳ ಆಧಾರದ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದೇನೆ. ಈಗ ಜಾವಾ ಅನ್ನೋ ಶೀರ್ಷಿಕೆಯ ಮೂಲಕ ಒಂದು ಸ್ಟ್ರಾಂಗ್ ಕಂಟೆಂಟ್ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ವೇಗ ಎನ್ನುವಂತೆ ಕಥಾಂದರವು ಅಷ್ಟೇ ಕುತೂಹಲಕಾರಿಯಾಗಿ ಸಾಗಲಿದ್ದು , 80ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ನಡೆದಂತಹ ನೈಜ ಘಟನೆಯನ್ನು ಆಧಾರಿತವಾಗಿದೆ. ಚಿತ್ರೋದ್ಯಮದವರಿಗೂ ತಿಳಿಯದಂತಹ ವಿಷಯವಾಗಿದ್ದು, ಜನಸಾಮಾನ್ಯರಿಗೆ ಈ ಒಂದು ಕಥೆ ಬಹಳ ಇಷ್ಟವಾಗಲಿದೆ. ನಟಿಯ ಬದುಕಿನ ಸುತ್ತ ಸಾಗುವ ಈ ಕಥಾ ಎಳೆ ಹಲವು ಘಟನೆಗಳಿಗೆ ಸಾಕ್ಷಿಯಾಗುವಂತಿದೆ. ಸರಿಸುಮಾರು ಎರಡು ವರ್ಷಗಳ ಕಾಲ ಈ ಕಥೆಯ ಪೂರ್ವ ತಯಾರಿ ಮಾಡಿಕೊಂಡು ಜಾವಾ ಎನ್ನುವ ಶೀರ್ಷಿಕೆ ಇಟ್ಟುಕೊಂಡು ಚಿತ್ರೀಕರಣಕ್ಕೆ ಹೊರಡಲು ಸಿದ್ದರಾಗಿದ್ದು ,



ಇದಕ್ಕೂ ಮೊದಲು ಒಂದು ವಿಭಿನ್ನ ಕಥೆಯ ಸ್ಕ್ರಿಪ್ಟ್ ರೆಡಿಯಾಗಿ ಮೇಲುಕೋಟೆಯಿಂದ ಪ್ರಯಾಣ ಬೆಳೆಸಿ ದಿಲ್ಲಿಯ ವರೆಗೂ ಹೋಗಿ ಸಂಚಲನ ಮೂಡಿಸುವ ಚಿತ್ರಕಥೆಯಾಗಿತ್ತು, ಅದು ನಟಿ ರಾಗಿಣಿಗೂ ಹೇಳಿದಂತಹ ಕಥೆ. ಅದು ಈಗ ಬೇಡ ಎಂದು ನಿರ್ಧರಿಸಿ ಈ ಒಂದು ಸಿನಿಮಾ ಜಗತ್ತಿನ ಕಥೆಯನ್ನು ಮಾಡುತ್ತಿದ್ದೇವೆ. 80ರ ದಶಕದ ಕಥೆ ಇದ್ದರೂ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ವಾಗುವಂತೆ ಚಿತ್ರಕಥೆ ಮಾಡಿದ್ದೇನೆ. ನಟ ರಾಜವರ್ಧನ್ ಪಾತ್ರ ಎಷ್ಟು ವಿಶೇಷವೋ , ಅಷ್ಟೇ ಕುತೂಹಲಕಾರಿ ಪಾತ್ರದಲ್ಲಿ ನಟಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಬಹಳಷ್ಟು ಪಾತ್ರಗಳು ಅಭಿನಯಿಸುತ್ತಿದ್ದಾರೆ. ಈ ನಮ್ಮ ಚಿತ್ರದಲ್ಲಿ ಪೂರ್ಣಚಂದ್ರ ತೇಜಸ್ವಿ ಸಂಗೀತವನ್ನು ನೀಡುತ್ತಿದ್ದು , ಕೆ.ಎಂ. ಪ್ರಕಾಶ್ ಸಂಕಲನವಿದ್ದು, ಛಾಯಾಗ್ರಾಹಕರ ಆಯ್ಕೆ ಆಗಬೇಕಿದೆ. ಜಾಹೀರಾತಿನ ರೂವಾರಿ ಪ್ರವೀಣ್ ಏಕಾಂತ ಜೊತೆಯಲ್ಲಿ ಸಿನಿಮಾ ಪ್ರಚಾರದ ಕಾರ್ಯವನ್ನು ಸುಮಂತ್ ಕನ್ನಡ ಪಿಚ್ಚರ್ ನಿರ್ವಹಿಸುತ್ತಿದ್ದಾರೆ. ಈ ಒಂದು ಚಿತ್ರ ಬಿರುಗಾಳಿಯಂತೆ ಸಂಚಲನವನ್ನ ಮೂಡಿಸುವ ಅಂಶವನ್ನು ಒಳಗೊಂಡಿದೆ. ಬಿರುಗಾಳಿಯಿಂದ ತಪ್ಪಿಸಿಕೊಂಡು ಓಡಿ ಬರುತ್ತಿರುವ ಹುಡುಗನೊಬ್ಬನ ಜಾವಾ ಪೋಸ್ಟರ್ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿದ್ದು, ಜುಲೈನಲ್ಲಿ ಚಿತ್ರೀಕರಣವನ್ನು ಆರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ತಂಡ ಹಂಚಿಕೊಳ್ಳಲಿದೆ ಎಂದರು.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'#sandalwood #filmindustry #yuvarajkumar #birthday #raghavendrarajkumar #puneethrajkuamr #fans #pratidhvani #pratidhvanidigital #pratidhvaninews
Previous Post

ಆಪರೇಷನ್ ಸಿಂಧೂರ್ ಬಗ್ಗೆ ಹುತಾತ್ಮ ವಿನಯ್ ಪತ್ನಿ ಹಿಮಾಂಶಿ ಏನಂದ್ರು..!

Next Post

20 ವರ್ಷಗಳ ಬಳಿಕ ಮೇ 23 ರಂದು ಮರು ಬಿಡುಗಡೆಯಾಗಲಿದೆ AMR ರಮೇಶ್ ನಿರ್ದೇಶನದ “ಸೈನೈಡ್”

Related Posts

Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
0

ಬಹು ನಿರೀಕ್ಷಿತ ಈ ಚಿತ್ರ ಗಣಪತಿ ಹಬ್ಬದ ವೇಳೆ ತೆರೆಗೆ ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Dynamic Prince Prajwal Devaraj) ಅವರ ಹುಟ್ಟುಹಬ್ಬ....

Read moreDetails

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025

S/o Muttanna Kannada Movi: ಅಪ್ಪ-ಮಗನ ಬಾಂಧವ್ಯಧ ಬಹು ನಿರೀಕ್ಷಿತ “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ತೆರೆಗೆ.

July 3, 2025

Pratham: ಪ್ರಥಮ್ ಅಭಿನಯದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದಿಂದ ರೊಮ್ಯಾಂಟಿಕ್ ಹಾಡು ಬಿಡುಗಡೆ .

July 3, 2025
Next Post
20 ವರ್ಷಗಳ ಬಳಿಕ ಮೇ 23 ರಂದು ಮರು ಬಿಡುಗಡೆಯಾಗಲಿದೆ AMR ರಮೇಶ್ ನಿರ್ದೇಶನದ “ಸೈನೈಡ್”

20 ವರ್ಷಗಳ ಬಳಿಕ ಮೇ 23 ರಂದು ಮರು ಬಿಡುಗಡೆಯಾಗಲಿದೆ AMR ರಮೇಶ್ ನಿರ್ದೇಶನದ "ಸೈನೈಡ್"

Recent News

Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 
Top Story

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

by Chetan
July 4, 2025
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada