
ವಡಗೇರಿ ತಾಲ್ಲೂಕಿನಲ್ಲಿ ಅಕ್ರಮ ಮರಳು, ಮದ್ಯ, ಮಟ್ಕಾ, ಇಸ್ಪೀಟ್ ತಡೆಯುವಲ್ಲಿ ಆಡಳಿತ ವಿಫಲ:
ಯಾದಗಿರಿ: ಜಿಲ್ಲೆಯ ವಡಗೇರಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಅಕ್ರಮ ಮರಳು, ಮದ್ಯ, ಮಟ್ಕಾ ಇಸ್ಪೀಟ್‌ಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಮುಖಕ್ಕೆ ಮಾಸ್ಕ್ ಧರಿಸಿ, ಮರಳು ಕಮೀಟಿ ಸಭೆಯ ವರದಿ ಪ್ರಕಟವಾದ ವಿವಿಧ ಪತ್ರಿಕೆಗಳ ವರದಿಗಳ ಜೆರಾಕ್ಸ್ ಪ್ರತಿಗಳನ್ನು ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಮೌನ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಂತರ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಮೇ. ೨೯ ರಂದು ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ಕಮೀಟಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಅಕ್ರಮ ಮರಳು ಧಂದೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಆದರೆ ಇಲ್ಲಿಯವರೆಗೆ ಅವರ ಆದೇಶ ಬರಿ ಪತ್ರಿಕೆಗಳಲ್ಲಿ ಬಂದ ವರದಿಗೆ ಮಾತ್ರ ಸೀಮಿತವಾಗಿದ್ದು ಎಂದಿನAತೆ ರಾಜಾರೋಷವಾಗಿ ಅಕ್ರಮ ಮರಳು, ಮದ್ಯ, ಮಟ್ಕಾ, ಇಸ್ಪೀಟ್ ಧಂದೆಗಳು ವಡಗೇರಿ ತಾಲ್ಲೂಕಿನಲ್ಲಿ ಯಾರ ಮುಲಾಜಿಲ್ಲದೇ ನಡೆಯುತ್ತಿವೆ.
ತಾಲ್ಲೂಕಿನ ಗೊಂದೆನೂರು, ಕುಮನೂರ, ಕೊಂಕಲ್, ಚೆನ್ನೂರ, ಹಯ್ಯಾ¼, ಐಕೂರುÀ ಸೇರಿದಂತೆ ವಿವಿಧೆಡೆ ಈ ಅಕ್ರಮಗಳು ನಡೆಯುತ್ತಲೇ ಇವೆ.
ಇದರಿಂದಾಗಿ ನಗರ, ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಗ್ರಾಮಗಳಲ್ಲಿ ಜನತೆ ಅಕ್ರಮ ಮದ್ಯ, ಇಸ್ಪೀಟ್ ಮಟ್ಕಾದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವಯಸ್ಸಿನ ಹುಡುಗರು ಸಾವಪ್ಪುತ್ತಿದ್ದಾರೆ.

ಇದಕ್ಕೆ ಕಾರಣ ಪೊಲೀಸ್ ವರಿಷ್ಠಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ವಡಗೇರಿ ಪಿಎಸ್.ಐ. ಅವರ ನಿರ್ಲಕ್ಷö್ಯ ಹಾಗೂ ಕುಮ್ಮಕ್ಕು ಗಳಿಂದಾಗಿ ಇವೆಲ್ಲ ರಾಜಾರೋಷವಾಗಿ ನಡೆಯುತ್ತಿವೆ.
ಈ ಹಿಂದೆ ಹೊಳೆ ದಂಡೆಗೆ ಅಕ್ರಮ ತಡೆಯಲು ಡಿಎಆರ್ ವ್ಯಾನ್ ಗಸ್ತು ತಿರುಗುತ್ತಿತ್ತು ಮತ್ತು ಅಲ್ಲೇ ಬೀಡು ಬಿಟ್ಟಿತ್ತು. ಇತ್ತಿಚೆಗೆ ಡಿಎಆರ್ ವ್ಯಾನ್ ಅನ್ನು ರದ್ದು ಮಾಡಲಾಗಿದೆ. ಭೀಮಾ ಮತ್ತು ಕೃಷ್ಣಾ ನದಿಯೊಳಗೆ ಉಸುಕು ಸಾಗಣೆ ಮಾಡಲು ರಸ್ತೆ ಮಾಡಿಕೊಂಡಿದ್ದಾರೆ. ಇದು ಭಾರಿ ಅಕ್ರಮವಾಗಿದ್ದು ಇಂತಹ ಹಗಲು ದರೋಡೆಗೆ ಪೊಲೀಸರೇ ಸ್ಕೇಚ್ ಹಾಕಿ ಸಹಕಾರ ನೀಡುತ್ತಿರುವಂತಹ ಸಂಗತಿ ಯಾದಗಿರಿಯ ವಡಗೇರಿಯಲ್ಲಿ ಮಾತ್ರ ನಡೆಯುತ್ತಿದೆ ಇಂತಹ ಭಂಡ ವ್ಯವಸ್ಥೆ ಸೃಷ್ಟಿಯಾಗಿದೆ.

ಇಂತಹ ನದಿಯೊಳಗೆ ಸುಮಾರು ಅರ್ಧ ಕಿ.ಮೀ. ಯಷ್ಟು ರಸ್ತೆಯೊಳಗೆ ಭಾರಿ ಗಾತ್ರದ ವಾಹನಗಳು, ಜೆಸಿಬಿ ಹಿಟಾಚಿ ಯಂತ್ರಗಳು ಸಂಚರಿಸುತ್ತಿವೆ. ಅಲ್ಲಿ ಮದಿಯ ಒಡಲು ಬಗೆದು ಮರಳು ತಂದು ದಂಡೆಗೆ ಹಾಕುತ್ತಿದ್ದಾರೆ. ನಂತರ ಅಲ್ಲಿಂದ ಮತ್ತೆ ಲಾರಿಗಳಿಗೆ ಏರಿಸಿ ಸಾಗಿಸುತ್ತಿದ್ದಾರೆ. ರಾತ್ರಿ ಶಬ್ದ ಮಾಲಿನ್ಯದಿಂದ ರಾತ್ರಿ ನೆಮ್ಮದಿಯಿಂದ ಮಲಗಲು ಆಗುತ್ತಿಲ್ಲ, ಹಗಲು ರಾತ್ರಿ ಧೂಳಿನಿಂದಾಗಿ ಪರಿಸರ ಕಲುಷಿತವಾಗುತ್ತಿದೆ, ರಸ್ತೆಗಳು ಹಾಳಾಗುತ್ತಿವೆ. ನಾಯಿ ಮುಂತಾದ ಪ್ರಾಣಿಗಳು ಸಾವಿಗೀಡಾಗುತ್ತಿವೆ.
ಜಿಲ್ಲೆಯ ಎಸ್.ಪಿ. ಎಂದರೆ ಅವರಿಗೆ ಇಂತಹುದ್ದೆಲ್ಲ ಮಾಹಿತಿ ಇರಬೇಕು ಮತ್ತು ಇಂತಹ ಸ್ಥಳಗಳಿಗೆ ಭೆಟಿ ಕೊಟ್ಟು ಮಾಹಿತಿ ಏಕೆ ಪಡೆಯುತ್ತಿಲ್ಲ ಎಂಬುದು ಜನತೆಯ ಪ್ರಶ್ನೆಯಾಗಿದೆ.
ಅಕ್ರಮ ಮರಳು ಸಾಗಣೆ ಮಾಡುವವರು ಧೈರ್ಯವಾಗಿ ಹೇಳುತ್ತಾ ನಾವು ಎಲ್ಲರಿಗೂ ಮಾಮೂಲು ಕೊಟಿದ್ದೇವೆ ಮೇಲಿನವರೆಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.

ಹೀಗೆ ಸಾಗಿದರೆ ಜಿಲ್ಲೆಯಲ್ಲಿ ಅಕ್ರಮಗಳ ದರ್ಬಾರ್ ನಡೆದು ಹಿಂದೆ ಯುಪಿ ಬಿಹಾರ ಆದಂತೆ ಆಗುವಲ್ಲಿ ಸಂಶಯವಿಲ್ಲ ಎಂದು ನಿಮಗೆ ಎಚ್ಚರಿಸುತ್ತಿದ್ದೇವೆ.
ಕೂಡಲೇ ನದಿಯಲ್ಲಿ ಹಾಕಿರುವಂತಹ ಅಕ್ರಮ ರಸ್ತೆಯನ್ನು ತೆರವು ಮಾಡಬೇಕು, ಸ್ಥಳದಲ್ಲಿ ಡಿಎಆರ್ ವಾಹನ ನೇಮಿಸಬೇಕು ಅಕ್ರಮಗಳಿಗೆ ಕಡಿವಾಣ ಹಾಕಬೇಕು
ಇತ್ತಿಚೆಗೆ ಶಿಕ್ಷಣದಲ್ಲಿ ಕೊನೆಯ ಸ್ಥಾನಕ್ಕೆ ಬಂದು ಮರ್ಯಾದೆ ಹೋಯಿತು. ಈಗ ಈ ಅಕ್ರಮಗಳಿಂದ ಜಿಲ್ಲೆ ಮರ್ಯಾದೆಯೂ ಹಾಳಾಗುತ್ತಿದೆ.
ಅಕ್ರಮಗಳಿಗೆ ಸಾಥ್ ಕೊಡುತ್ತಿರುವವರೇ ಅಕ್ರಮ ಮಾಡಿದಂತಾಗಿದ್ದು ಇವುಗಳಿಗೆ ತಕ್ಷಣ ಬ್ರೇಕ್ ಹಾಕಬೇಕು ಆದ್ದರಿಂದ ಕ್ರಮ ವಹಿಸಿ ಈ ಎಲ್ಲ ಅಕ್ರಮಗಳನ್ನು ತಡೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮೊಹ್ಮದ್ ರಫಿ ವೀರಣ್ಣಗೌಡ, ರಂಗಪ್ಪ, ತಿಪ್ಪಣ್ಣ, ಶರಣು, ಅಯ್ಯಣ್ಣ, ಸಿದ್ದಪ್ಪ, ಶರಣಪ್ಪ, ಹುಲಿಗೆಪ್ಪ, ಹಣಮಂತ, ಸಾಬಣ್ಣ, ಶರಣಬಸವ, ಭೀಮರಡ್ಡಿ, ದೇವಪ್ಪ, ಗೋವಿಂ<ದ, ನಾಗಪ್ಪ, ಭೀಮಾಶಂಕರ, ರವಿ, ಪರಶುರಾಮ, ಅಯ್ಯಣ್ಣ, ನಿಂಗಪ್ಪ ಬಾಗ್ಲಿ ವೆಂಕಟೇಶ, ತಿಮ್ಮನ್ಣ ದೇವಪ್ಪ ಅಯ್ಯಮ್ಮ , ಮರೆಮ್ಮ ಸೇರಿ ಅನೇಕರು ಇದ್ದರು.