ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮಾರ್ಕ್ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದ್ದು, ಈ ವಾರಂತ್ಯಕ್ಕೆ ಮಾರ್ಕ್ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಲಿದೆ.
ಈ ಬಗ್ಗೆ ಸ್ವತಃ ನಟ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಾರ್ಕ್ ಚಿತ್ರದ ಸ್ಟೈಲಿಶ್ ಲುಕ್‌ನ ಫೋಟೋ ಕೂಡ ಶೇರ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಇದಾಗಿದ್ದು, ಈ ಮೊದಲು ʼK 47ʼ ಎಂದು ಕರೆಯಲಾಗುತ್ತಿತ್ತು. ಬಳಿಕ ಈ ಚಿತ್ರದ ಶೀರ್ಷಿಕೆ ʼಮಾರ್ಕ್ʼ ಎಂದು ಅಧೀಕೃತವಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಚಿತ್ರದ ಕೆಲಸಗಳು ಬಹುತೇಕ ಅಂತಿಮಗೊಳ್ಳುತ್ತಿದ್ದು, ಈ ವಾರಂತ್ಯದಲ್ಲಿ ಮಾರ್ಕ್ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಲಿದೆ.


