ರಾಮನವಮಿಯಂದು (Ram navami) ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರನ್ನ ವಿದ್ಯಾರಣ್ಯಪುರ (vidyaranya pura) ಪೊಲೀಸರು ಬಂಧಿಸಿದ್ದಾರೆ.A1 ಫರ್ಮಾನ್, A2ಸಮೀರ್ ಹಾಗೂ ಇಬ್ಬರು ಅಪ್ರಾಪ್ತರರನ್ನ ವಶಕ್ಕೆ ಪಡೆಯಲಾಗಿದೆ. ಒಟ್ಟು ನಾಲ್ವರಿಂದ ಗಲಾಟೆ ಆಗಿರೋ ಬಗ್ಗೆ ದೂರು ನೀಡಲಾಗಿತ್ತು. ಈಗಾಗಲೇ ಆರೋಪಿಗಳ ವಿಚಾರಣೆ ನಡೆಸ್ತಿರೋ ಪೊಲೀಸರು (police), ಉಳಿದ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಸದ್ಯ ಹಲ್ಲೆ ಮಾಡಿದ ಯುವಕರು ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿದ್ರು ಅನ್ನೋ ಅನುಮಾನ ವ್ಯಕ್ತವಾಗ್ತಿದ್ದು, ಗಾಂಜಾ ಸೇವನೆ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.

ಏಪ್ರಿಲ್ 17ರ ರಾಮ ನವಮಿಯಂದು ಬೆಂಗಳೂರಿನ (Benaglore) ವಿದ್ಯಾರಣ್ಯಪುರಂ ಬಳಿಯ ಬೆಟ್ಟಳ್ಳಿಯ ಮಸೀದಿ (masjid) ಸಮೀಪ ಯುವಕರು ಪುಂಡಾಟ ಮೆರೆದಿದ್ದರು. ಶ್ರೀರಾಮನವಮಿ ಹಬ್ಬ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದ ಸಹಕಾರ ನಗರ ಮೂಲದ ಮೂವರು ಯುವಕರನ್ನು ಅಡ್ಡಗಟ್ಟಿ ಕಿರಿಕ್ ಮಾಡಿದ್ದರು. ಸಂಪೂರ್ಣ ಘಟನೆಯನ್ನ ಕಾರಿನಲ್ಲಿದ್ದ (car) ಯುವಕರು ವೀಡಿಯೋ ಚಿತ್ರೀಕರಿಸಿ ಪೋಲಿಸರಿಗೆ ದೂರು ಕೊಟ್ಟಿದ್ದರು.

ಅನ್ಯಧರ್ಮದ ಯುವಕರ ಗುಂಪೊಂದು ಕಾರಿನ ಬಳಿ ಬಂದು ಜೈಶ್ರೀರಾಮ್ (jai sri ram) ಹೇಳೋಕಾ? ಅಂತಾ ಕಿರಿಕ್ ತೆಗೆದಿದ್ದು, ಜೈಶ್ರೀರಾಮ್ ಅಲ್ಲ.. ಓನ್ದಿ ಅಲ್ಲಾಹು ಅಕ್ಟರ್ (Allah hu akbar) ಅಂತ ಜಗಳವಾಡಿದ್ದಾರೆ. ನಮ್ಮ ಹಬ್ಬ, ನಾವೇನಾದ್ರೂ ಹೇಳ್ತಿವಿ, ನಿಮ್ಮ ಹಬ್ಬಕ್ಕೆ ನಾವು ಬರ್ತೀವಾ ಅಂತ ಹಿಂದೂ ಯುವಕರು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಕಾರಿನಲ್ಲಿದ್ದ ಯುವಕರ ಮೇಲೆ ಐವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪೋಲಿಸರು ಈಗಾಗಲೇ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ.