
ಮಂಡ್ಯ: ಮಂಡ್ಯದಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ ಮ್ಯಾರಥಾನ್ ರನ್ 5K-10K ಆಯೋಜನೆ ಮಾಡಲಾಗಿತ್ತು. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದು, ನಮ್ಮ ಪೊಲೀಸ್ ನಮ್ಮ ಹೆಮ್ಮೆ ಹೆಸರಿನಲ್ಲಿ ಮ್ಯಾರಥಾನ್ ಓಟ ನಡೀತು. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮ್ಯಾರಥಾನ್ ಓಟಕ್ಕೆ ಚಾಲನೆ ಕೊಟ್ಟಿದ್ದಾರೆ ಡಿಸಿ, ಎಸ್ಪಿ ಹಾಗೂ ಚಲನಚಿತ್ರ ನಟರು.

ಸದೃಢ ಆರೋಗ್ಯ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಮ್ಯಾರಥಾನ್ ಆಯೋಜನೆ ಮಾಡಲಾಗಿದೆ. ಮ್ಯಾರಥಾನ್ನಲ್ಲಿ ಭಾಗವಹಿಸಿದವರಿಗೆ ಟೀ ಶರ್ಟ್ ವಿತರಣೆ ಮಾಡಲಾಗಿದೆ. ಡಿಸಿ ಡಾ. ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಬಿಗ್ ಬಾಸ್ ಖ್ಯಾತಿಯ ರಜತ್, ನಟ ರಿಷಿ ಸೇರಿ ಹಲವರು ಭಾಗಿಯಾಗಿದ್ದರು. ಮ್ಯಾರಥಾನ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಜನರು ಭಾಗಿಯಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲೂ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು. ರ್ಯಾಪರ್ ಚಂದನ್ ಶೆಟ್ಟಿ ಮ್ಯಾರಥಾನ್ಗೆ ಚಾಲನೆ ನೀಡಿದ್ರು. ಚಿಕ್ಕಬಳ್ಳಾಪುರದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯ್ತು. ಡ್ರಗ್ಸ್ ಫ್ರಿ ಚಿಕ್ಕಬಳ್ಳಾಪುರ, ಫಿಟ್ ನೆಸ್ ಫಾರ್ ಆಲ್ ಹೆಸರಿನಲ್ಲಿ ಮ್ಯಾರಥಾನ್ ನಡೀತು.. ಚಿಕ್ಕಬಳ್ಳಾಪುರ ನಗರದಲ್ಲಿ 5 ಕಿಲೋಮೀಟರ್ ಮ್ಯಾರಥಾನ್ ಮಾಡಲಾಯ್ತು. ಉದ್ಘಾಟನೆ ವೇಳೆ ತಮಟೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ ಎಸ್ಪಿ ಹಾಗು ಎಎಸ್ಪಿ. ಚಂದನ್ ಶೆಟ್ಟಿ ಜೊತೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ ಅಧಿಕಾರಿಗಳು. ಮ್ಯಾರಥಾನ್ನಲ್ಲಿ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಸೇರಿದಂತೆ ನೂರಾರು ಪೊಲೀಸರು ಭಾಗಿಯಾಗಿದ್ದರು..
ಚಾಮರಾಜನಗರದಲ್ಲಿ ಕರ್ನಾಟಕ ಪೊಲೀಸ್ ರನ್ ಮ್ಯಾರಾಥಾನ್ ಆಯೋಜನೆ ಮಾಡಲಾಗಿತ್ತು. ಕವಾಯತು ಮೈದಾನದಿಂದ ಆರಂಭವಾದ ಮ್ಯಾರಥಾನ್ನಲ್ಲಿ ಡಿಸಿ ಶಿಲ್ಪಾನಾಗ್, ಎಸ್ಪಿ ಕವಿತಾ ಮೊದಲಾದವರು ಭಾಗಿಯಾಗಿದ್ದರು. 5 ಕಿ.ಮೀ ಮ್ಯಾರಥಾನ್ ನಡೀತು. ಪೊಲೀಸರೊಂದಿಗೆ ಸಾರ್ವಜನಿಕರು ಭಾಗಿಯಾಗಿದ್ದರು. ಡ್ರಗ್ಸ್ ಮುಕ್ತ ಕರ್ನಾಟಕ, ಸೈಬರ್ ಅಪರಾಧದ ವಿರುದ್ದ, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮ್ಯಾರಾಥಾನ್ ಆಯೋಜನೆ ಮಾಡಲಾಗಿತ್ತು. ಮೊದಲು ಬಂದ 50 ಜನರಿಗೆ ಪ್ರಶಸ್ತಿ ವಿತರಣೆ ಮಾಡಲಾಯ್ತು.