ಮಣಿಪುರದಲ್ಲಿ ಹಿಂಸಾಚಾರ (Manipur’s violence) ಮತ್ತೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ರಾಜಕೀಯವಾಗಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮಣಿಪುರ BJP ಘಟಕದಲ್ಲಿ ದೊಡ್ಡ ಬಿರುಕು ಮೂಡಿದ ಹಾಗೆ ಕಾಣುತ್ತಿದೆ. ಇದಕ್ಕೆ ಕಾರಣ ಆಡಳಿತ ಪಕ್ಷದ ಶಾಸಕರೇ ನಾಪತ್ತೆಯಾಗಿರೋದು.
ಹೌದು, ಮಣಿಪುರದ CM ಬಿರೇನ್ ಸಿಂಗ್ (Biren Singh) ಅವರ ಅಧ್ಯಕ್ಷತೆಯಲ್ಲಿ ನಿನ್ನೆ NDA ಸಭೆ ನಡೆಸಲಾಗಿದ್ದು, ಈ ವೇಳೆ 37 BJP ಶಾಸಕರ ಪೈಕಿ ಬರೋಬ್ಬರಿ 19 ಮಂದಿ ಭಾಗವಹಿಸಿರಲಿಲ್ಲ. ಈ ಶಾಸಕರಲ್ಲಿ ಎರಡೂ ಸಮುದಾಯದ ಮುಖಂಡರು ಸೇರಿದ್ದಾರೆ.
ಇನ್ನು 37 BJP ಪಕ್ಷದ ಶಾಸಕರ ಪೈಕಿ ಒಟ್ಟು 7 ಕುಕಿ ಸಮುದಾಯದವರಾಗಿದ್ದು, ಈ ಎಲ್ಲಾ ಏಳು ಶಾಸಕರು ಗೈರು ಹಾಜರಾಗಿದ್ದರು. ಹೀಗೆ ನಾಪತ್ತೆಯಾದವರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಯುಮ್ನಮ್ ಖೇಮಚಂದ್ ಸಿಂಗ್ ಪ್ರಮುಖರಾಗಿದ್ದಾರೆ. ಈ ರೀತಿ ಸಭೆಗೆ ಗೈರಾದ 11 NDA ಸದಸ್ಯರಿಗೆ CM ಸೆಕ್ರೆಟರಿಯೇಟ್ ನೋಟಿಸ್ ಕಳುಹಿಸಿದೆ.