ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ,ಪ್ರತಿಯೊಬ್ಬರೂ ಕೂಡ ಬಾಯಿ ಚಪ್ಪರಿಸಿಕೊಂಡು ಈ ಹಣ್ಣನ್ನ ತಿಂತಾರೆ ,ಬೇಸಿಗೆಗಾಲ ಬಂತು ಅಂದ್ರೆ ಮಾವಿನ ಹಣ್ಣು ಗೆ ಕಾಯ್ತಾ ಇರ್ತೀವಿ,ಮಾವಿನ ಕಾಯಿಗೆ ಉಪ್ಪು ಕಾರ ಬೆರೆಸಿ ತಿಂದ್ರೆ ಆಹಾ ಅದ್ರ ರುಚಿನೆ ಬೇರೆ ಲೆವೆಲ್.. ಇನ್ನು ಹಣ್ಣಾದ ಮೇಲೆ ಅಬ್ಬಬ್ಬ ಕೇಳೋದೇ ಬೇಡ ,ಇದರ ರುಚಿಯನ್ನ ನಾವು ವರ್ಣನೆ ಮಾಡಲು ಸಾಧ್ಯವಿಲ್ಲ,ರುಚಿ ಮಾತ್ರ ಅಲ್ಲ ಅದರ ಸುಗಂಧ ಕೂಡ ಅದ್ಭುತ. ಬೇಸಿಗೆ ಅಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ವಿಧದ ಮಾವಿನ ಹಣ್ಣುಗಳದ್ದೆ ಹವಾ..
ಹಣ್ಣುಗಳ ರಾಜ ಅಂತಾನೇ ಫೇಮಸ್ ಆಗಿರುವ ಈ ಮಾವಿನ ಹಣ್ಣು ರುಚಿ ,ಗಮ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು (Mango Health Benefits) .ಹಾಗಾದ್ರೆ ಈ ಮಾವಿನಹಣ್ಣಿನ ಪ್ರಯೋಜನಗಳೇನು ಅನ್ನೋದ್ರ ಡೀಟೇಲ್ಸ್ ಹೀಗಿದೆ
ಡೈಜೇಶನ್ ಗೆ ಉತ್ತಮ
ಮಾವಿನ ಹಣ್ಣಿನಲ್ಲಿ ಅಮೈಲೇಸ್ ಜೀರ್ಣಕಾರಿ ಕಿಣ್ವಗಳಿರುತ್ತವೆ . ಮಾವಿನ ಹಣ್ಣನ್ನMango ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಹಾಗೂ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಕಾನ್ಸ್ಟಿಪೇಶನ್ ಮತ್ತು ಅತಿಸಾರದ ಸಮಸ್ಯೆ ಹಾಗೂ ಜೀರ್ಣಕಾರಿ ಸಮಸ್ಯೆಗಳನ್ನ ನಿವಾರಣೆಯಾಗುತ್ತದೆ.
ವೈಟ್ ಲಾಸ್
ಮಾವಿನ ಹಣ್ಣನ್ನ ತಿನ್ನೋದ್ರಿಂದ ವೈಟ್ ಲಾಸ್ ಆಗೋದಿಕ್ಕೆ ತುಂಬಾನೇ ಈಜಿ. ಈ ಹಣ್ಣಿನಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಫೈಟೋ ಕೆಮಿಕಲ್ ಇರುತ್ತವೆ ಹಾಗೂ ನಾರಿನಾಂಶ ಹೆಚ್ಚಿರುವುದರಿಂದ ಡಯಟ್ ಮಾಡುವವರು ನಾರಿನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ,ಹಸಿವು ಜಾಸ್ತಿ ಆಗಲ್ಲ. ಹೀಗಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಸುಲಭ ಮಾರ್ಗ.
ತ್ವಜೆಯ ಹಾಗೂ ಕೂದಲಿಗೆ ಉತ್ತಮ
ಮಾವಿನ ಹಣ್ಣಿನಲ್ಲಿ ವಿಟಮಿನ್ A C ಹಾಗೂ E ಆಂಟಿ ಆಕ್ಸಿಡೆಂಟ್ ಇರೋದ್ರಿಂದ ಕೂದಲಿಗೆ ಹಾಗೂ ತ್ವಚೆಗೆ ತುಂಬಾನೆ ಒಳ್ಳೆಯದು. ನಮ್ಮ ಸ್ಕಿನ್ಗೆ ಆಗುವಂತ ಡ್ಯಾಮೇಜಸ್ ವಿರುದ್ಧ ಈ ವಿಟಮಿನ್ಸ್ ಹೋರಾಡಿ ನಮ್ಮ ತ್ವಜೆಯನ್ನು ಹೆಲ್ದಿಯಾಗಿ ಇಡೋದಕ್ಕೆ ಸಹಕಾರಿ. ಹಾಗೆ ಸಾಕಷ್ಟು ವಿಟಮಿನ್ಸ್ ಇರೋದ್ರಿಂದ ಕೂದಲು ಉದುರುವುದು,ಸ್ಪ್ಲಿಟ್ ಎಂಡ್ಸ್ ಎಲ್ಲವೂ ಕೂಡ ನಿವಾರಣೆಯಾಗುತ್ತದೆ.
ಇದೆಲ್ಲದರ ಜೊತೆಗೆ ನಮ್ಮ ಬ್ಲಡ್ ಪ್ರೆಷರ್ ಅನ್ನ ಕಂಟ್ರೋಲ್ ಮಾಡುತ್ತೆ, ಹೈಬಿಪಿ ಇದ್ರೆ ನಾರ್ಮಲ್ ಆಗಿ ತಂದು ಇಡೋದಕ್ಕೆ ಸಹಕಾರಿ, ಹಾಗೂ ಕೊಲೆಸ್ಟ್ರಾಲ್ ಕೂಡ ತುಂಬಾನೇ ಒಳ್ಳೆಯದು, ಜೊತೆಗೆ ನಮ್ಮ ಹೃದಯಕ್ಕೆ ಸಂಬಂಧಿಸಿದ ಯಾವುದೇ ಒಂದು ಕಾಯಿಲೆ ಇದ್ದರೂ ಕೂಡ ಇದು ನಿವಾರಿಸುವುದಕ್ಕೆ ಸಹಕಾರಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಎಫೆಕ್ಟ್ ಮಾಡೋದಕ್ಕೂ ಕೂಡ ಬಿಡೋದಿಲ್ಲ. ಡಯಾಬಿಟಿಸ್ ಇದ್ದವರು ಮಾವಿನಹಣ್ಣನ್ನು ತಿನ್ನೋದ್ರಿಂದ ಕೂಡ ಬ್ಲಡ್ ಶುಗರ್ ಲೆವೆಲ್ ನಾರ್ಮಲ್ ಆಗಿ ಇರುತ್ತೆ.