ಮಂಡ್ಯದ (mandya) ಆಲೆಮನೆಯಲ್ಲಿ ನಡೆಸಲಾಗ್ತಿದ್ದ ಭ್ರೂಣ ಹತ್ಯೆ ಕೇಸ್ ಬೆಳಕಿಗೆ ಬಂದಾಗ ಇಡೀ ರಾಜ್ಯವೇ ಬೆಚ್ಚಿತ್ತು. ಆನಂತರ ಮಂಡ್ಯದ ಸರ್ಕಾರಿ ಕ್ವಾಟರ್ಸ್ನಲ್ಲಿ (Government quarters) ಕೂಡ ಇಂಥದ್ದೆ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಈ ಎರಡೂ ಪ್ರಕರಣಗಳು ಒಂದಕ್ಕೊಂದು ತಳಕು ಹಾಕಿಕೊಂಡಿರೋದು ತನಿಖೆಯಲ್ಲಿ ಬಯಲಾಗಿದೆ.
ಮಂಡ್ಯದ ಸರ್ಕಾರಿ ಕ್ವಾಟರ್ಸ್ನಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ (Big twist) ಸಿಕ್ಕಿದೆ. ಕರಾಳ ದಂಧೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ (Big shock) ಬಿಗ್ ಶಾಕ್ ಎದುರಾಗಿದ್ದು, ಮಂಡ್ಯದ ಆಲೆಮನೆ ಕೇಸ್ನ ಆರೋಪಿಯೇ ಈ ಪ್ರಕರಣದಲ್ಲೂ ಕಿಂಗ್ ಪಿನ್ (King pin) ಅನ್ನೋದು ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಹುಳ್ಳೇನಹಳ್ಳಿ ಆಲೆಮನೆಯಲ್ಲಿ ಈ ಕರಾಳದಂಧೆ ನಡೀತಾ ಇತ್ತು. ಆ ಸಂದರ್ಭದಲ್ಲಿ ಕಿರಾತಕ ನವೀನ್ ಕುಮಾರ್ (Naveen) ಜೈಲಿಗೆ ಹೋಗಿ ವಾಪಸ್ಸಾಗಿದ್ದ. ಆದ್ರೂ ಕೂಡ ಬುದ್ದಿ ಕಲಿಯದ ನವೀನ್ ಮತ್ತೆ ಹಳೆ ಚಾಳಿಯನ್ನ ಮುಂದುವರೆಸಿದ್ದ. ಇನ್ನೂ ಈ ಪ್ರಕರಣ ಬೇಧಿಸೋಕೆ ಪೊಲೀಸರು ಮುಂದಾಗಿದ್ದು, ಈ ಕೇಸ್ನಲ್ಲಿ ಮತ್ತಷ್ಟು ಜನರನ್ನ ಬಂಧಿಸೋ ಸಾಧ್ಯತೆಯಿದೆ.