ಮಂಡ್ಯದಲ್ಲಿ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಘಟನೆ ನಡೆದಿದೆ. ಬೆಳ್ಳೂರು ಪಟ್ಟಣದ ಅಭಿಲಾಶ್ (29) ಹಲ್ಲೆಗೊಳಗಾದ ಯುವಕ.
ಬೆಳ್ಳೂರಿನ ಸಂತೆ ಬೀದಿಯಲ್ಲಿ ಶುಕ್ರವಾರ ರ್ಯಾಶ್ ಡ್ರೈವ್ ಮಾಡ್ತಿದ್ದ ಮುಸ್ಲಿಂ ಯುವಕರು. ಈ ವೇಳೆ ರಭಸವಾಗಿ ಕಾರು ಚಾಲನೆ ಮಾಡಿದ್ದ ಯುವಕರಿಗೆ ಅಭಿಲಾಷ್ ಮತ್ತು ನಾಗೇಶ್ ಬುದ್ಧಿ ಹೇಳಿದ್ದರು. ಹಿಂದೂ ಯುವಕನ ಮೇಲೆ ಮುಸ್ಲಿಂ ಸಮುದಾಯದ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.
ಕಾರನ್ನು ತಡೆದು ಬುದ್ಧಿ ಹೇಳಿದ್ದಕ್ಕೆ ಅಭಿಲಾಷ್ ಮತ್ತು ನಾಗೇಶ್ ಮೇಲೆ ಹಲ್ಲೆಗೆ ನಿರ್ಧರಿಸಿದ್ದ ಮುಸ್ಲಿಂ ಯುವಕರು. ಇಂದು ಸಂಜೆ ಅಭಿಲಾಷ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನಿಗೆ ಬೆಳ್ಳೂರಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಹಿಂದೂ ಯುವಕನ ಮೇಲಿನ ಹಲ್ಲೆಯಿಂದ ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಆಗಿದೆ.
ಬೆಳ್ಳೂರು ಪಟ್ಟಣದ ಪೊಲೀಸ್ ಠಾಣೆ ಸೇರಿದಂತೆ ಆದಿಚುಂಚನಗಿರಿ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾ ಹೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.