ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಅಕಾಲಿಕ ಮಳೆಗೆ ರೈತ ಸುಮದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮ್ಯಾಂಡೋಸ್ ಚಂಡಮಾರುತ ಪ್ರಭಾವ ಬೀರಿದ್ದು ಶಿವಮೊಗ್ಗ ಜಿಲ್ಲಾಯದ್ಯಂತ ಎಡಬಿಡದೆ ಮಳೆ ಸುರಿಯುತ್ತಿದೆ.

ಮಳೆಯಿಂದಾಗಿ ಅಡಿಕೆ ಕೊಯ್ಲು ಮತ್ತು ಭತ್ತ ಕಟಾವಿಗೆ ಅಡ್ಡಿಯಾಗಿದ್ದು ಮಳೆಗೆ ನೀರಿನಿಂದ ಆವೃತವಾದ ಗದ್ದೆ ಹಾಗೂ ಕಟಾವು ಮಾಡಿದ ಭತ್ತದ ಪೈರು. ರೋಗದ ನಡುವೆ ಉಳಿದಿದ್ದ ಅಲ್ಪಸ್ವಲ್ಪ ಅಡಿಕೆ ಕೊಯ್ಲು ಮಾಡಲಾಗದೇ ರೈತರು ಕಂಗಾಲಾಗಿದ್ದು ಅಕಾಲಿಕ ಮಳೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶಿವಮೊಗ್ಗ ತಾಲೂಕು ಕೆರೆಹಳ್ಳಿ ಗ್ರಾಮದ ರುದ್ರಪ್ಪ ಎಂಬ ರೈತನಿಗೆ ಸೇರಿದ ಭತ್ತದ ಗದ್ದೆ ಸಂಪೂರ್ಣ ನೀರು ಪಾಲಾಗಿದೆ.
