ಕೆಜಿಎಫ್ ಚಾಪ್ಟರ್ -2 ಸಿನಿಮಾ ವೀಕ್ಷಿಸುವ ವೇಳೆ ಥಿಯೇಟರ್ ಒಳಗಡೆಯೇ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದರಿಂದ ಯುವಕನೊಬ್ಬ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಶಿಗ್ಗಾಂವಿ ತಾಲೂಕಿನ ಮುಗುಳಿ ಗ್ರಾಮದ ವಸಂತ ಕುಮಾರ ಸಣ್ಣ ಕಲ್ಲಪ್ಪ ಶಿವಪುರ ಎಂಬ ಯುವಕ ಗಾಯಗೊಂಡಿದ್ದರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಕೊನೆಯ ಶೋ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕರ ನಡುವೆ ಘರ್ಷಣೆ ಆಗಿದೆ. ಈ ವೇಳೆ ದುಷ್ಕರ್ಮಿಯೊಬ್ಬ ಪಿಸ್ತೂಲು ತೆಗೆದು ಮೂರು ಸುತ್ತು ಗುಂಡು ಹಾರಿಸಿದ್ದಾನೆ.
ಶಿಗ್ಗಾಂವಿಯ ರಾಜಶ್ರೀ ಥಿಯೇಟರ್ ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಂಡು ಹಾರಿಸಿ ನಾಪತ್ತೆಯಾಗಿರುವ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.