ರೈತರೊಬ್ಬರು ಮುಂಬೈನಲ್ಲಿರುವ ವಿಧಾನಸಭೆ ಎದುರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತನಿಸಿರುವ ಘಟನೆ ಮಂಗಳವಾರ ನಡೆದಿದೆ.
ಒಸ್ಮಾನಾಬಾದ್ ಜಿಲ್ಲೆಯವರಾದ ರೈತನನ್ನು ಸುಭಾಶ್ ದೇಶ್ಮುಖ್ ಎಂದು ಗುರುತಿಸಲಾಗಿದೆ. ಕೂಡಲ್ಲೇ ಸ್ಥಳದಲ್ಲಿದ್ದ ಪೊಲೀಸರು ಬೆಂಕಿಯನ್ನು ನಂದಿಸಿ ಹತ್ತಿರದ ಆಸ್ಪತ್ರಗೆ ದಾಖಲಿಸಿದ್ದಾರೆ.
ರೈತನ ದೇಹ ಭಾಗ ಶೇ.20ರಷ್ಟು ಸುಟ್ಟುಗಾಯಗಳಾಗಿದ್ದು ರೈತನು ಪ್ರಾಣಪಾಯದಿಂದ ಪಾರಾಗಿದ್ದಾನೆ. ಮುಂಬೈನ ಜಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತನು ತನ್ನ ಸಹೋದರನೊಂದಿಗೆ ಬೂ ವಿವಾದ ಹೊಂದಿದ್ದು ಇದೇ ವಿಚಾರಕ್ಕೆ 5-6 ತಿಂಗಳ ಹಿಂದೆ ಅವರ ತಂದೆಯೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ವರದಿಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದು ದುರಾದೃಷ್ಟಕರ ಸಂಗತಿ ಎಂದು ಬೇಸರಿಸಿದ್ದಾರೆ ಹಾಗೂ ಅಧಿಕಾರಿಗಳಿಗೆ ಅವರ ರೈತನ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ವಿರೋಧ ಕ್ಷಗಳು ಆಡಳಿತರೂಢ ಮೈತ್ರಿ ಪಕ್ಷವನ್ನ ತೀವ್ರ ತರಾಟೆಗೆ ತೆಗೆದುಕೊಂಡಿವೆ.