
ನವದೆಹಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (83) ಅವರು ಇಂದು ಚುನಾವಣಾ ಭಾಷಣ ಮಾಡುತ್ತಿದ್ದಾಗ ವೇದಿಕೆ ಮೇಲೆಯೇ ಏಕಾಏಕಿ ಅಸ್ವಸ್ಥರಾಗಿದ್ದು, ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜಮ್ಮು-ಕಾಶ್ಮೀರದ ಕಥುವಾದಲ್ಲಿ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖರ್ಗೆ ಅವರು ಮಾತನಾಡುತ್ತಿದ್ದಾಗ, ದಿಢೀರ್ ಆಗಿ ಅವರು ಆಯಾಸಗೊಂಡು ಮಾತನಾಡಲು ಸಂಕಟಪಟ್ಟರು. ಕೂಡಲೇ ಅವರ ನೆರವಿಗೆ ಧಾವಿಸಿದ ಕಾಂಗ್ರೆಸ್ ನಾಯಕರು, ಖರ್ಗೆ ಅವರ ಭದ್ರತಾ ಸಿಬ್ಬಂದಿ ಕುಡಿಯಲು ನೀರು ಕೊಟ್ಟು ಆಸನದ ಮೇಲೆ ಕೂರಿಸಿದರು. ಆಗಲೂ ಖರ್ಗೆ ಅವರು ಆಯಾಸ ಅನುಭವಿಸಿದ ನಂತರ ಅವರನ್ನು ಆಂಬ್ಯುಲೆನ್ಸ್ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇದೀಗ ಮಾಹಿತಿ ಲಭ್ಯವಾಗಿದೆ.

ಆಸಿಡಿಟಿ ಸಮಸ್ಯೆಯಿಂದ ಖರ್ಗೆ ಅವರಿಗೆ ಹೀಗೆ ಆಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.