ರಾಜ್ಯ ರಾಜಕಾರಣದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಭಿನ್ನಮತ ಮಿತಿ ಮೀರಿದಂತೆ ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ತಣ್ಣಗಾಗಿಸಬೇಕಿದ್ದ ಹೈಕಮಾಂಡ್ (Highcommand) ಈಗ ಯಾಕೋ ಮೌನಕ್ಕೆ ಜಾರಿದಂತೆ ಕಾಣುತ್ತಿದೆ.

ಸಿಎಂ ಬದಲಾವಣೆ, ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಹಾಗೂ ಬಹಿರಂಗ ಹೇಳಿಕೆಗಳು ಹೆಚ್ಚಾಗ್ತಿವೆ. ಈ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ (Congress highcommand) ಸೈಲೆಂಟ್ ಆದಂತೆ ಭಾಸವಾಗುತ್ತಿದೆ.

ಈಗಾಗಲೇ ಯಾವುದೇ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಈ ಹಿಂದೆ ವಾರ್ನ್ ಮಾಡಿತ್ತು. ಆದ್ರೆ, ಬಹಿರಂಗ ಹೇಳಿಕೆಯ ಜಟಾಪಟಿ ಜೋರಾಗಿದ್ದು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೀಗೆ ಖುದ್ದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೈಲೆಂಟ್ ಆಗಿರುವುದು ಹಾಗೂ ಕಾಂಗ್ರೆಸ್ ಹೈ ಕಮಾಂಡ್ ಕೂಡ ಮೌನಕ್ಕೆ ಜಾರಿರೋದು ಕುತೂಹಲಕ್ಕೆ ಕಾರಣವಾಗಿದೆ.