ನಾಯಕತ್ವ ಬದಲಾವಣೆಯ ನಿರ್ಧಾರವು ಪಕ್ಷದ ಹೈಕಮಾಂಡ್ ಕೈಯಲ್ಲಿ ಇರುತ್ತದೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಭೇಟಿ ನೀಡಿದ ನಂತರ ಈ ಊಹಾಪೋಹ ಬಲಗೊಂಡಿದೆ.

ಡಿ.ಕೆ.ಶಿವಕುಮಾರ್ (DK Shivakumar)ಅವರು ಸಿದ್ದರಾಮಯ್ಯರಿಂದ (Siddaramaiah) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಮಾತುಗಳಿಗೆ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ʼಪಕ್ಷದ ಹೈಕಮಾಂಡ್ ಮಾತ್ರ ಅದನ್ನು ನಿರ್ಧರಿಸಬಹುದು. ಇಲ್ಲಿ ಯಾರಿಗೂ ಅವರು ಏನು ಯೋಜಿಸುತ್ತಿದ್ದಾರೆಂದು ತಿಳಿದಿಲ್ಲ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು. ಇಂತಹ ಮಾತುಗಳನ್ನು ಹರಡುವ ಮೂಲಕ ಅನಗತ್ಯ ತೊಂದರೆ ಸೃಷ್ಟಿಸುವ ಅಗತ್ಯವಿಲ್ಲ” ಎಂದು ಉತ್ತರಿಸಿದ್ದಾರೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಕಾಂಗ್ರೆಸ್ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ (H A Iqbal Hussain) ಭಾನುವಾರ ಹೇಳಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಹುಸೇನ್, ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶಿವಕುಮಾರ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. “ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಅವರು ಎಷ್ಟು ಶ್ರಮಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಯೋಜನೆ ಮತ್ತು ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಲಾಭವಾಯಿತು. ನಾನು ವದಂತಿಗಳನ್ನು ನಂಬುವವನಲ್ಲ, ಆದರೆ ಪಕ್ಷದ ಉನ್ನತ ನಾಯಕರು ಎಲ್ಲದರ ಬಗ್ಗೆ ತಿಳಿದಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ನಾನು ನಂಬುತ್ತೇನೆʼ ಅಂತಾ ಹೇಳಿದ್ದರು.

ಕೆಲವು ನಾಯಕರು ಸೆಪ್ಟೆಂಬರ್ (September) ನಂತರ ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸಬಹುದು ಎಂದು ಹೇಳುತ್ತಿದ್ದಾರೆ. ಜನರು ಅದನ್ನೇ ಮಾತನಾಡುತ್ತಿದ್ದಾರೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಮಹತ್ವದ ನಿರ್ಧಾರವನ್ನ ನಿರೀಕ್ಷಿಸುತ್ತೇವೆ” ಎಂದು ಉತ್ತರಿಸಿದರು. 2023ರ ಚುನಾವಣೆಯ ನಂತರ ಸರ್ಕಾರ ರಚಿಸುವ ಬಗ್ಗೆ ಸೋನಿಯಾ ಗಾಂಧಿ (Soniya Gandhi), ರಾಹುಲ್ ಗಾಂಧಿ (Rahul Gandhi) ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕತ್ವವು ಅಂತಿಮ ಕರೆ ನೀಡಿತ್ತು ಎಂದು ಅವರು ವರದಿಗಾರರಿಗೆ ನೆನಪಿಸಿದರು. “ಆ ನಿರ್ಧಾರ ತೆಗೆದುಕೊಂಡಾಗ ನಾವೆಲ್ಲರೂ ದೆಹಲಿಯಲ್ಲಿದ್ದೆವು. ಮುಂದಿನ ನಿರ್ಧಾರವೂ ಹೈಕಮಾಂಡ್‌ನಿಂದ ಬರುತ್ತದೆ. ನಾವು ಕಾದು ನೋಡಬೇಕಾಗಿದೆ” ಎಂದು ಹುಸೇನ್ ಹೇಳಿದ್ದಾರೆ.ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ (DCM DK Shivakumar) ಡಿ.ಕೆ.ಶಿವಕುಮಾರ್ ನಡುವಿನ ಸಂಭಾವ್ಯ ಅಧಿಕಾರ ಹಂಚಿಕೆ ಒಪ್ಪಂದದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಪಕ್ಷದ ಉನ್ನತ ನಾಯಕರ ಕಟ್ಟುನಿಟ್ಟಿನ ಸೂಚನೆಗಳ ನಂತರ ವದಂತಿಗಳು ಇತ್ಯರ್ಥವಾಗಿದ್ದರೂ, ಇತ್ತೀಚೆಗೆ ಅವು ಮತ್ತೆ ಸಖತ್ ಸದ್ದು ಮಾಡುತ್ತಿವೆ.

ಮೇ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿಗಳಾಗಿದ್ದರು. ಕೊನೆಯಲ್ಲಿ ಪಕ್ಷವು ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುವಂತೆ ಮನವೊಲಿಸಿತು. ಆ ಸಮಯದಲ್ಲಿ “ಪರ್ಯಾಯ ಮುಖ್ಯಮಂತ್ರಿ” ವ್ಯವಸ್ಥೆಯ ಬಗ್ಗೆ ವರದಿಗಳಿದ್ದವು. ಆ ಸಂದರ್ಭದಲ್ಲಿ ಶಿವಕುಮಾರ್ ಅರ್ಧದಷ್ಟು ಅವಧಿಯನ್ನು ವಹಿಸಿಕೊಳ್ಳುತ್ತಾರೆಂದು ಹೇಳಲಾಗಿತ್ತು. ಆದರೆ ಪಕ್ಷವು ಇದರ ಬಗ್ಗೆ ಅಧಿಕೃತವಾಗಿ ಎಂದಿಗೂ ದೃಢಪಡಿಸಲಿಲ್ಲ.ಖರ್ಗೆ ಹೇಳಿಕೆಗೆ ಬಿಜೆಪಿ ಟೀಕೆ ನಾಯಕತ್ವ ಬದಲಾವಣೆಗಳನ್ನು ಪಕ್ಷದ ಹೈಕಮಾಂಡ್ ಮಾತ್ರ ನಿರ್ಧರಿಸುತ್ತದೆ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಅವರನ್ನು ಕಟುವಾಗಿ ಟೀಕಿಸಿದೆ. ಪಕ್ಷದ ವಕ್ತಾರ ಶೆಹಜಾದ್ ಪೂನಾವಾಲಾ (Shahazad Poonavala) ಅವರು, ʼಖರ್ಗೆ ಅವರಿಗೆ ಇಂತಹ ವಿಷಯಗಳಲ್ಲಿ ನಿಜವಾದ ಪಾತ್ರವಿಲ್ಲʼ ಎಂದು ಹೇಳಿದರು.