600 ಕ್ಕೂ ಹೆಚ್ಚು ವಕೀಲೀರು ಸಹಿ ಮಾಡಿರುವ ಪತ್ರವೊಂದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪಟ್ಟಭದ್ರ ಹಿತಾಸಕ್ತಿ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರಲು, ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಮತ್ತು ನಮ್ಮ ನ್ಯಾಯಾಲಯಗಳನ್ನು ಕ್ಷುಲ್ಲಕ ತರ್ಕ ಮತ್ತು ಹಳಸಿದ ಆಧಾರದ ಮೇಲೆ ದೂಷಿಸಲು ಪ್ರಯತ್ನಿಸುತ್ತಿರುವ ಬಗೆಗೆ ನಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸುತ್ತಿದೇವೆ. ರಾಜಕೀಯ ಅಜೆಂಡಾಗಳು,ಅವರ ವರ್ತನೆಗಳು ವಿಶ್ವಾಸ ಮತ್ತು ಸಾಮರಸ್ಯದ ವಾತಾವರಣವನ್ನು ಹಾಳುಮಾಡುತ್ತಿವೆ, ಇದು ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ನಿರೂಪಿಸುತ್ತದೆ. ರಾಜಕೀಯ ಪ್ರಕರಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡಂತೆ ಅವರ ಒತ್ತಡದ ತಂತ್ರಗಳು ಹೆಚ್ಚು ಸ್ಪಷ್ಟವಾಗಿವೆ. ಈ ತಂತ್ರಗಳು ನಮ್ಮ ನ್ಯಾಯಾಲಯಗಳಿಗೆ ಹಾನಿಯುಂಟುಮಾಡುತ್ತವೆ ಮತ್ತು ನಮ್ಮ ಪ್ರಜಾಸತ್ತಾತ್ಮಕ ರಚನೆಗೆ ಧಕ್ಕೆ ತರುತ್ತವೆ ಎಂದು ವಕೀಲರ ಗುಂಪು ಸುಪ್ರೀಂ ಕೋರ್ಟ್ ನ ಮುಖ್ಯ ನಾಯಾಯ ಮೂರ್ತಿ ಚಂದ್ರಚೂಡ್ ಅವರಿಗೆ ಪತ್ರ ಬರೆದಿತ್ತು.

ಸರ್ಕಾರದ ನೆಚ್ಚಿನ ವಕೀಲ ಸಾಳ್ವೆ ಅವರು ಚುನಾವಣಾ ಬಾಂಡ್‌ಗಳ ಲಂಚ ಮತ್ತು ಸುಲಿಗೆ ವಿವರಗಳನ್ನು ಬಹಿರಂಗಪಡಿಸುವುದನ್ನು ತಡೆಯಲು ಶತಾಯ-ಗತಾಯ ಪ್ರಯತ್ನಿಸಿದ್ದಾರೆ, ಇದು ಅದರದ್ದೇ ಮುಂದುವರೆದ ಭಾಗ ಎಂದು ಕೆಲವರು ಆರೋಪಿಸುತ್ತಾರೆ.

ಎಲೆಕ್ಟೊರಲ್ ಬಾಂಡ್ ಪ್ರಕರಣದಲ್ಲಿ ಕಠಿಣ ಆದೇಶಗಳಿಂದ ಹಿಂದೆ ಸರಿಯಲು CJI ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ 600 ಅಸಂಖ್ಯ ವಕೀಲರ ಗುಂಪನ್ನು saalve ಮುನ್ನಡೆಸುತ್ತಿದ್ದಾರೆ ಎಂಬ ಆರೋಪ ಈಗ ಜೋರಾಗಿದೆ.ಹಾಗಿದ್ರೆ ಈ ಬಾಂಡ್ ದಾನಿಗಳಲ್ಲಿ ಎಷ್ಟು ಮಂದಿ ಸಾಲ್ವೆಯ ಗ್ರಾಹಕರಾಗಿದ್ದಾರೆ? ಎಂಬ ಪ್ರಶ್ನೆಯನ್ನು ಕೂಡ ಎತ್ತಲಾಗಿದೆ. ಇಷ್ಟೆಲ್ಲದರ ಮಧ್ಯೆ ಈ ಪತ್ರವನ್ನು ಬೆಂಬಲಿಸಿ ಮೋದಿ ಟ್ವೀಟ್ ಮಾಡಿರುವುದು ಮತ್ತಷ್ಟು ಆಶ್ಚರ್ಯಕರವಾಗಿ ಕಂಡುಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಮೋ !
ಇತರರನ್ನು ಬೊಬ್ಬೆ ಹೊಡೆಯುವುದು ಮತ್ತು ಬೆದರಿಸುವುದೇ ಹಳೆಯ ಕಾಂಗ್ರೆಸ್ ಸಂಸ್ಕೃತಿ.
5 ದಶಕಗಳ ಹಿಂದೆಯೇ ಅವರು “ಬದ್ಧ ನ್ಯಾಯಾಂಗ” ಕ್ಕಾಗಿ ಕರೆ ನೀಡಿದ್ದರು – ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಇತರರಿಂದ ಬದ್ಧತೆಯನ್ನು ಬಯಸುತ್ತಾರೆ ಆದರೆ ರಾಷ್ಟ್ರದ ಕಡೆಗೆ ಯಾವುದೇ ಬದ್ಧತೆಯಿಂದ ದೂರವಿರುತ್ತಾರೆ.140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುವುದರಲ್ಲಿ ಆಶ್ಚರ್ಯವಿಲ್ಲ.
ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಗೆ ತಿವಿದಿದ್ದಾರೆ.
ಒಟ್ನಲ್ಲಿ ದಿನ ಕಳೆದಂತೆ ಎಲೆಕ್ಟೊರಲ್ ಬಾಂಡ್ ಬಗೆಗಿನ ಪ್ರಕರಣ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದ್ದು , ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದು ಮತದಾರರ ಮೇಲೆ ಎಷ್ಟು ಪರಿಣಾಮಕಾರಿಯಾಗುತ್ತೋ ಕಾದುನೋಡಬೇಕಿದೆ.