ಈ ಬಾರಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಹೈವೋಲ್ವೇಜ್ (High voltage) ಕ್ಷೇತ್ರಗಳು ಎಂದು ಗುರುತಿಸಿಕೊಂಡಿರುವ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ (Bangalore rural) ಕೂಡ ಒಂದು. ಡಿಕೆ ಸುರೇಶ್ (Dk suresh) ಈ ಬಾರಿ ಸ್ವಕ್ಷೇತ್ರದಲ್ಲಿ ಸವಾಲನ್ನು ಎದುರಿಸಬೇಕಿರೋದು ನಿಶ್ಚಿತ . ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ (Dr.C.N.Manjunath), ಡಿಕೆ ಸುರೇಶ್ ಗೆ ಸಮರ್ಥ ಎದುರಾಳಿ ಎಂದು ಬಿಂಬಿತವಾಗಿದ್ದರೂ ಅದೆಲ್ಲವೂ ಕೇವಲ ರಾಜಕೀಯ ಲೆಕ್ಕಾಚಾರಗಳು ಮಾತ್ರ. ಆದ್ರೆ ಕ್ಷೇತ್ರದ ಜನರ ಅಭಿಪ್ರಾಯ ಬೇರೆಯೇ ಇದ್ದಂತಿದೆ.

ಹೌದು, ಡಿಕೆ ಸುರೇಶ್ – 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್‌ನಿಂದ (congress) ರಾಜ್ಯದಲ್ಲಿ ಜಯಗಳಿಸಿದ ಏಕೈಕ ಸಂಸದ. ರಾಜ್ಯವ್ಯಾಪಿ ಮೋದಿ ಅಲೆ ಹೊಡೆತದಲ್ಲಿ ಎಲ್ಲಾ ಕ್ಷೇತ್ರಗಳು ದಿಕ್ಕಾಪಾಲಾದರೂ ಕೂಡ, ಮೋದಿ (modi) ವರ್ಚಸನ್ನು ಎದುರಿಸಿ ಗೆದ್ದು ಬಂದ ಏಕೈಕ ನಾಯಕ ಡಿಕೆ ಸುರೇಶ್. ಇದಕ್ಕೆ ಕಾರಣ ಕ್ಷೇತ್ರದ ಜನ ಅವರ ಜನಪರ ಕೆಲಸಗಳಿಗೆ ಜೈಕಾರ ಹಾಕಿದ್ದು.

ಇಡೀ ದೇಶದಲ್ಲೇ ಸಂಸದರ ಸಂಪೂರ್ಣ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ಏಕೈಕ ಸಂಸದ ಡಿಕೆ ಸುರೇಶ್ ಎಂಬ ಹೆಗ್ಗಳಿಕೆ ಇವರಿಗಿದೆ. ಜೊತೆಗೆ ಕೋವಿಡ್ (covid-19) ಸಂದರ್ಭದಲ್ಲಿ ಜನಪ್ರಥಿನಿಧಿಗಳು ಮನೆಯಲ್ಲಿ ಕುಳಿತು ರೋಮ್ ಮೀಟಿಂಗ್ (zoom meet) ಗಳ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿದ್ರೆ, ಜೀವದ ಹಂಗು ತೊರೆದು ರಸ್ತೆಗಿಳಿದು ಜನರ ಮಧ್ಯೆ ನಿಂತು ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಸಂಸದ ಅಂದ್ರೆ ಅದು ಕೇವಲ ಡಿಕೆ ಸುರೇಶ್ ಮಾತ್ರ.

ಹೀಗಾಗಿ ಈಗಾಗಲೇ ಸತತ ಎರಡು ಬಾರಿ ಆಯ್ಕೆಯಾಗಿ ಕ್ಷೇತ್ರವನ್ನ ಪ್ರಧಿನಿಸಿದ್ದರೂ ಕೂಡ, ಈ ಬಾರಿಯೂ ಜನಾಭಿಪ್ರಾಯ ಅವರ ಪರವಾಗಿಯೇ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬರ್ತಿದೆ. ಕ್ಷೇತ್ರ ಪರ್ಯಟನೆ ಮಾಡಿ ಜನಾಭಿಪ್ರಾಯ ಸಂಗ್ರಹಿಸಿದಾಗಲೂ ಕೂಡ ಜನ ಇದೇ ಅಭಿಪ್ರಾಯಗಳನ್ನ ನೀಡಿದ್ದಾರೆ. ಓರ್ವ ಬೀದಿಬದಿ ವ್ಯಾಪಾರಿಯಿಂದ ಓರ್ವ ಅನ್ನದಾತನವರೆಗೂ ಪ್ರತಿಯೊಬ್ಬರ ಕಷ್ಟಕ್ಕೂ ಡಿಕೆ ಸುರೇಶ್ (Dk suresh) ಸ್ಪಂದಿಸಿದ್ದಾರೆ ಎಂಬ ಭಾವನೆ ಕ್ಷೇತ್ರದ ಜನರಲ್ಲಿದೆ.
ರಾಜಕೀಯ ಲೆಕ್ಕಾಚಾರದಲ್ಲಿ ನೋಡೋದಾದ್ರೆ, ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮತಗಳು ಒಟ್ಟುಗೂಡಿದ್ರೆ ದಿಕೆ ಸುರೇಶ್‌ಗೆ ಸಂಕಷ್ಟ ಖಚಿತ ಎಂದು ವಿಶ್ಲೇಷಿಸಲಾಗುತ್ತೆಯಾದ್ರೂ ಜನಾಭಿಪ್ರಾಯ ಇದಕ್ಕೆ ವ್ಯತಿರಿಕ್ತಾಗಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿರುವ ಡಾ.ನಂಜುನಾಥ್ (Or manjunath) ಕೂಡ ಸಜ್ಜನ, ಹೃದಯವಂತ ಎಂದು ಗುರುತಿಸಿಕೊಂಡಿದ್ದರೂ, ಅಂತಿಮವಾಗಿ ಕಳೆದ 10 ವರ್ಷಗಳ ಕಾಲ ಕ್ಷೇತ್ರಕ್ಕಾಗಿ ದುಡಿದ ಡಿಕೆ ಸುರೇಶ್ರನ್ನ ಮತದಾರರು ಕೈಬಿಡುವ ಸಂಭವ ಇಲ್ಲ.

ಸಹೋದರ ಡಿಕೆ ಶಿವಕುಮಾರ್ (Dk shivakumar) ರ ಕ್ಷೇತ್ರದ ಮೇಲಿನ ಹಿಡಿತ, ಸಂಸದರಾಗಿ ಡಿಕೆ ಸುರೇಶ್ ಕಾರ್ಯ ವೈಖರಿ ಮತ್ತು ಜನಾಶಿರ್ವಾದ ಎಲ್ಲವೂ ಒಟ್ಟುಗೂಡಿ ಡಿಕೆ ಸುರೇಶ್ ಈ ಬಾರಿ ಮತ್ತೊಮ್ಮೆ ವಿಜಯಪತಾಕೆ ಹಾರಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ ಎಂಬ ಅಭಿಪ್ರಾಯವೇ ಹೌಚಿದೆ. ಅಂತಿಮವಾಗಿ ಜನತಾ ಜನಾರ್ಧನನ ತೀರ್ಪು ಏನು ಎಂಬುದನ್ನ ಜೂನ್ 4ರ ವರೆಗೂ ಕಾದು ತೀಲಿಯಬೇಕಿದೆ.