ಪ್ರೊಫೆಸರ್ ಕೆ.ಎಸ್ ಭಗವಾನ್ ಮತ್ತೆ ಸುದ್ದಿಯಲ್ಲಿದ್ದಾರೆ, ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನ ನೀಡುವ ಮುಖಾಂತರ ಆಗಾಗ ಸದ್ದು ಮಾಡುವ ಪ್ರೊಫೆಸರ್ ಕೆ.ಎಸ್ ಭಗವಾನ್ ಅವರು ಈ ಬಾರಿ ಮಹಿಷನ ಕುರಿತು ನೀಡಿದ ಹೇಳಿಕೆ ಹಲವು ಪ್ರಶ್ನೆಗಳನ್ನ ಹುಟ್ಟಿ ಹಾಕಿದೆ,
ಈ ಹಿಂದೆ ಮೈಸೂರಿನಲ್ಲಿ ನಾಡಹಬ್ಬ ದಸರಾಗೆ ಪರ್ಯಾಯವಾಗಿ ವಿಚಾರವಾದಿಗಳು ಹಾಗೂ ಚಿಂತಕರಿಂದ ಮಹಿಷ ದಸರವನ್ನ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಹಿಂದಿನ ಸರ್ಕಾರ ಈ ಆಚರಣೆಗೆ ತಡೆಯೊಡ್ಡಿತ್ತು ಈಗ ಮತ್ತೊಮ್ಮೆ, ಮಹಿಷ ದಸರಾ ಆಚರಣೆಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಈ ಕುರಿತು ಮೈಸೂರಲ್ಲಿ ಮಾತನಾಡಿರುವ ವಿಚಾರವಾದಿ ಪ್ರೊಫೆಸರ್ ಕೆ.ಎಸ್ ಭಗವಾನ್ ಅವರು ” ಮಹಿಷ ಈ ನೆಲದ ಮಹಾಪುರುಷನಾಗಿದ್ದಾನೆ, ಮಹಿಷ ಮಹಾ ಪುರುಷನಾಗಿದ್ದರಿಂದಲೇ ಮೈಸೂರಿಗೆ ಈ ಹೆಸರು ಬಂದಿದೆ, ಮಹಿಷ ಕೆಟ್ಟವನಾಗಿದ್ದರೆ ಆತನ ಹೆಸರನ್ನು ಇಡುತ್ತಿರಲಿಲ್ಲ, ಮಹಿಷ ಒಳ್ಳೆಯವನಾಗಿದ್ದರಿಂದ ಮಹಿಷಪುರ ಎಂದು ಹೆಸರಿಡಲಾಗಿತ್ತು, ಕಾಲ ನಂತರದಲ್ಲಿ ಮಹಿಷಪುರ, ಮಹಿಷೂರು, ಮೈಸೂರು ಎಂದು ಬದಲಾಗಿದೆಯಷ್ಟೇ. ಮಹಿಷ ಆದರ್ಶ ಪುರುಷ, ಹೀಗಾಗಿ ಮಹಿಷ ದಸರಾ ಆಚರಣೆಗೆ ಯಾರೂ ಕೂಡ ಅಡ್ಡಿಪಡಿಸಬಾರದು, ಮಹಿಷ ದಸರಾ ಗೆ ಅನುಮತಿ ನೀಡುವುದಾಗಿ ಸಚಿವ ಮಹದೇವಪ್ಪ ಹೇಳಿದ್ದಾರೆ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ
ಒಟ್ಟಾರೆಯಾಗಿ ಇದೀಗ ಮಹಿಷ ದಸರಾ ಆಚರಣೆಗೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಮಹಿಷ ದಸರಾ ಆಚರಣೆ ಆಗಲಿದೆ ಎಂಬುದು ಸ್ಪಷ್ಟವಾಗಿದೆ