ಮಹಿಷ ದಸರಾ ಪರ-ವಿರೋಧ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರು ನಗರ ಪೊಲೀಸ್ ಆಯುಕ್ತರು ದೊಡ್ಡ ತೀರ್ಮಾನ ತೆಗೆದುಕೊಂಡಿದ್ದು, ಮೈಸೂರಿನಲ್ಲಿ ಮಹಿಷ ದಸರಾ ಆಚರಿಸಲು ಅನುಮತಿ ನೋಡಿದೆ. ಜೊತೆಗೆ ಮೈಸೂರಿನಲ್ಲಿ 144 ಸೆಕ್ಷನ್ ಜಾರಿ ಕೂಡ ಮಾಡಿದ್ದಾರೆ.
ಈ ಕುರಿತು ಅನುಮತಿ ಪತ್ರ ಹೊರಡಿಸಿರುವ ಮೈಸೂರು ನಗರ ಪೊಲೀಸ್ ಆಯುಕ್ತರು, ಮೇಲ್ಕಂಡರವರ ವತಿಯಿಂದ 13-10-2013 ರಂದು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆವರೆಗೆ ದೇವರಾಜ ಪೊಲೀಸ್ ಠಾಣಾ ಸರಹದ್ದಿನ ಪುರಭವನದ ಒಳ ಆವರಣದಲ್ಲಿ ಡಾ. ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡಿ ನಂತರ ಮಹಿಷಾ ಉತ್ಸವ ಹಾಗೂ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಸುವ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕೆಳಕಂಡ ಷರತ್ತಿನ ಮೇಲೆ ಹಾಗೂ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ನಡೆಸಲು ಅನುಮತಿಸಿದೆ ಎಂದು ಪತ್ರ ಹೊರಡಿಸಲಾಗಿದೆ.
ಮಹಿಷ ದಸರಾ ಸಮಿತಿಯವರು ಪ್ರತಿ ವರ್ಷ ನಡೆಸುತ್ತಿದ್ದ ಮಹಿಷ ದಸರಾ ನಡೆಸಬೇಕು ಎಂದರೆ, ಇತ್ತ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿದ್ದರು. ಆದರೆ, ಮೈಸೂರು ನಗರ ಆಯುಕ್ತ ರಮೇಶ್ ಬಾನೋತ್ ಅವರು ಎರಡು ಕಡೆಯವರ ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಈಗ ಮಹಿಷ ದಸರಾಗೆ ಅನುಮತಿ ನೀಡಿದ್ದು ಜೊತೆಗೆ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಚಾಮುಂಡಿ ಬೆಟ್ಟ ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಅ.12 ರ ಮಧ್ಯರಾತ್ರಿ 12-00 ಗಂಟೆಯಿಂದ ಅ.14 ರ ಬೆಳಿಗ್ಗೆ 06-00 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಮೈಸೂರು ಸಿಟಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಮಹಿಷ ದಸರಾ ಆಚರಣೆಗೆ ನಗರ ಆಯುಕ್ತರು ಹೊರಡಿಸಿರುವ ಷರತ್ತುಗಳನ್ನು ;-
1) ಯಾವುದೇ ಮೆರವಣಿಗೆ, ಪ್ರತಿಭಟನೆ, ರಾಲಿ, ಬೈಕ್ ರಾಲಿ, ನಡೆಸುವುದು.
2) ಪರ ವಿರೋಧ ಘೋಷಣೆ ಕೂಗುವುದು
3) ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು
4) 05 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು.
5) ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು.
6) ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪುಚಾರ, ಧ್ವನಿವರ್ಧಕ ಬಳಸುವುದು, ಫೆಕ್ಸ್ ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದು ನಿಷೇಧ.
7)ಚಪ್ಪರ ಅಥವಾ ವೇದಿಕೆ ನಿರ್ಮಿಸಲು ಪಾಲಿಕೆ ನಿಯಮದಡಿ ಅನುಪತಿ ಪಡೆಯುವುದು.
8)ಯಾವುದೆ ಗಲಾಟೆಯಾದಲ್ಲಿ ಸಮಿತಿ ಹಾಗೂ ಸಂಬಂಧ ಪಟ್ಟ ಸಂಸ್ಥೆ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಲಾವುದು ಎಂದು ಹೇಳಿದೆ.