ಮಂಗಳವಾರ ಗಡಿ ವಿವಾದದ ಕುರಿತು ಎಂಇಎಸ್ ಮುಖಂಡರ ಜೊತೆ ಚರ್ಚಿಸಲು ಮಹಾರಾಷ್ಟ್ರದ ಇಬ್ಬರು ಸಚಿವರು ಹಾಗೂ ಓರ್ವ ಸಂಸದ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಸಚಿವರು ಹಾಗೂ ಸಂಸದ ರಾಜ್ಯ ಪ್ರವೇಶಿಸದಂತೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಸಚಿವರುಗಳಾದ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ, ಸಂಸದ ಧೈರುಶೀಲ ಮಾನೆ ಬೆಳಗಾವಿ ಪ್ರವೇಶಿಸಬಾರದು ಎಂದು ಜಿಲ್ಲಾ ಮಾಜಿಸ್ಟ್ರೇಟ್ ನಿತೇಶ್ ಪಾಟೀಲ್ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು.
ಇನ್ನು ಪರಿಸ್ಥಿತ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಹಾರಾಷ್ಟ್ರದ ಭೇಟಿಯನ್ನು ಸಚಿವರು ಬೆಳಗಾವಿ ಭೇಟಿಯ್ನು ರದ್ದುಗೊಳಿಸಿದ್ದಾರೆ ಮತ್ತು ಈ ಬಗ್ಗೆ ಸ್ವತಃ ಸಚಿವ ಶಂಭುರಾಜ್ ಪಾಟೀಲ್ ದೇಸಾಯಿ ಖಚಿತಪಡಿಸಿದ್ದಾರೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಸಚಿವ ಶಂಭುರಾಜ್ ಪಾಟೀಲ್ ಮೊದಲಿಗೆ ಸಂಘಟನೆಗಳಿಂದ ಡಿಸೆಂಬರ್ 3ರಂದು ಭೇಟಿ ನೀಡುವಂತೆ ಮನವಿ ಮಾಡಿದ್ದವು ನಂತರ ಡಿಸೆಂಬರ್ 6ರಂದು ಬರುವಂತೆ ಹೇಳಿದ್ದವು. ಆದರೆ, ಸ್ಥಳೀಯ ಸಂಘಟನೆಗಳ ತೀವ್ರ ಪ್ರತಿರೋಧ ಹಾಗೂ ಬಾಬಾ ಸಾಹೇಬ್ ಡಾ || ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವಿರುವ ಕಾರಣ ಕಾನೂನು ಸುವ್ಯವಸ್ಥೆ ಹದಗಡೆಬಾರದು ಎಂಬ ಕಾರಣಕ್ಕೆ ಭೇಟಿ ರದ್ದು ಮಾಡಿದ್ದೇವೆಂದು ತಿಳಿಸಿದ್ದಾರೆ.