ಪ್ರಯಾಗರಾಜ್ ನಲ್ಲಿ (Prayagaraj) ನಡೆಯುತ್ತಿರುವ ಮಹಾಕುಂಭಮೇಳಕ್ಕೆ (Maha kumbh) ನಾಳೆ (ಫೆ 25) ಶಿವರಾತ್ರಿಯೊಂದಿಗೆ (Shivaratri) ಅಧಿಕೃತವಾಗಿ ತೆರೆ ಬೀಳಲಿದೆ. ಉತ್ತರ ಪ್ರದೇಶ ಸರ್ಕಾರ ನೀಡಿರುವ ಲೆಕ್ಕಾಚಾರದ ಪ್ರಕಾರ ಇದುವರೆಗೂ 64 ಕೋಟಿಗೂ ಅಧಿಕ ಭಕ್ತಾದಿಗಳು ತೀರ್ಥಸ್ನಾನದಲ್ಲಿ ಭಾಗಿಯಾಗಿದ್ದಾರೆ.

ಮಹಾ ಕುಂಭ ಮೇಳದ ಮೊದಲ ದಿನ, ಜನವರಿ 13 ರಂದು 1.70 ಕೋಟಿ ಭಕ್ತಾದಿಗಳಿಂದ ತೀರ್ಥಸ್ನಾನ, ಜನವರಿ 14 ರಂದು 3.5 ಕೋಟಿ, ಜನವರಿ 29 ರಂದು 7.64 ಕೋಟಿ, ಫೆಬ್ರವರಿ 3 ರಂದು 2.57 ಕೋಟಿ, ಇನ್ನು ಫೆಬ್ರವರಿ 12 ರಂದು 2.04 ಕೋಟಿ, ಅಂತಿಮವಾಗಿ ಫೆಬ್ರವರಿ 26ರ ನಾಳೆ 3 ಕೋಟಿಗೂ ಅಧಿಕ ಭಕ್ತರು ತೀರ್ಥಸ್ನಾನ ಮಾಡುವ ನಿರೀಕ್ಷೆಯಿದೆ.

ಒಟ್ಟಾರೆ ಮಹಾಕುಂಭ ಮೇಳದಲ್ಲಿ 65 ಕೋಟಿಗೂ ಅಧಿಕ ಭಕ್ತರಿಂದ ತೀರ್ಥಸ್ನಾನದ ದಾಖಲೆ ನಿರ್ಮಾಣವಾಗಿದೆ. 40 ದಿನಗಳಲ್ಲಿ 45 ಕೋಟಿ ಭಕ್ತಾದಿಗಳು ತೀರ್ಥಸ್ನಾನ ಮಾಡುವ ನಿರೀಕ್ಷೆಯನ್ನ ಯುಪಿ ಸರ್ಕಾರ ಹೊಂದಿತ್ತು. ಆದ್ರೆ ಯುಪಿ ಸರ್ಕಾರದ ನಿರೀಕ್ಷೆ ಮೀರಿ 20 ಕೋಟಿ ಹೆಚ್ಚು ಭಕ್ತರಿಂದ ತೀರ್ಥಸ್ನಾನದಲ್ಲಿ ಭಾಗಿಯಾಗಿದ್ದಾರೆ.