ಚೆಸ್ ವಿಶ್ವಕಪ್ ಫೈನಲ್ನಲ್ಲಿ ಭಾರತದ ಪ್ರಜ್ಞಾನಂದ ಅವರನ್ನು ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಸೋಲಿಸಿದ್ದಾರೆ. ಮ್ಯಾಗ್ನಸ್ ಕಾರ್ಲ್ಸನ್ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿದ್ದು, ಭಾರತದ ಯುವ ಗ್ರಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಮೊದಲ ಎರಡು ಸುತ್ತು ಡ್ರಾದಲ್ಲಿ ಮುಕ್ತಾಯಗೊಂಡಿದ್ದರಿಂದ, ಅಂತಿಮ ಫಲಿತಾಂಶಕ್ಕಾಗಿ ಇಂದು ಟೈ-ಬ್ರೇಕರ್ ಪಂದ್ಯ ನಡೆಸಲಾಗಿದೆ.
ಮೊದಲ ಟೈ-ಬ್ರೇಕರ್ನಲ್ಲಿ ಜಯ ಸಾಧಿಸಿದ ಹಾಲಿ ವಿಶ್ವ ಚಾಂಪಿಯನ್ ಕಾರ್ಲ್ಸನ್ 1-0 ಮುನ್ನಡೆ ಸಾಧಿಸಿದರು.
ಎರಡನೇ ಟೈ-ಬ್ರೇಕರ್ ಪಂದ್ಯವನ್ನು ಡ್ರಾ ಮಾಡಲು ಕಾರ್ಲ್ಸನ್ ಯಶಸ್ವಿ ಆಗಿರುವುದರಿಂದ, ಪ್ರಜ್ಞಾನಂದ ವಿರುದ್ಧ ಕಾರ್ಲ್ಸನ್ 1.5 ಅಂತರದಿಂದ ಜಯಿಸಿದ್ದಾರೆ