ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗುವ ಕಂಗನಾಳ ಹುಚ್ಚಾಟ ಮುಂದುವರೆದಿದೆ. ಪದ್ಮಶ್ರೀ ಪ್ರಶಸ್ತಿ ಸಿಕ್ಕ ನಂತರ ಮತ್ತೆ ಮೋದಿ ಭಜನೆ ಮಾಡಲು ಹೋಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಉಗಿಸಿಕೊಳ್ಳುತ್ತಿದ್ದಾರೆ.
ಈಕೆಯ ಪ್ರಕಾರ, ‘ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ ಅಲ್ಲ, 2014ರಲ್ಲಿ ಅಂತೆ! ಅಂದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಸ್ವಾತಂತ್ರ್ಯ ಬಂದಿದ್ದಂತೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳುವ ಮೂಲಕ ಸ್ವಾತಂತ್ರ್ಯ ಹೋರಾಟಹಾರರನ್ನು ಮತ್ತು ಸ್ವಾತಂತ್ರ್ಯ ಹೋರಾಟವನ್ನು ಈಕೆ ಅವಮಾನಿಸಿದ್ದಾಳೆ. ಮೀಡಿಯಾ ಕಾರ್ಕ್ರಮದಲ್ಲಿ ಈ ರೀತಿ ಮಾತಮಾಡಿದ್ದು, ಅದರ ವಿಡಿಯೋವನ್ನು ಟ್ವಿಟರ್ನಲ್ಲಿ ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.
ಸ್ವರ ಭಾಸ್ಕರ್ ಮತ್ತು ವರುಣ್ ಗಾಂಧಿ ಮುಂತಾದವರು ಕಂಗನಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈಕೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಈ ಹಿಂದೆ ಜನವರಿ ೩೦ರಂದು ಗಾಂಧಿಯ ಪಿಣ್ಯತಿಥಿಯ ದಿನ ಟ್ವಿಟರ್ನಲ್ಲಿ ಗೋಡ್ಸೆ ಫೋಟೋ ಹಾಕಿ ವಿವಾದ ಮಾಡಿದ್ದರು. ಇತ್ತೀಚೆಗೆ ವೆಬ್ ಸೀರಿಸ್ ʼತಾಂಡವ್ʼ ಕುರಿತು ಟ್ವೀಟ್ ಮಾಡಿ, ʼಇಂತವರ ತಲೆ ಕತ್ತರಿಸುವ ಕಾಲ ಬಂದಿದೆʼ ಎಂದು ಚಿತ್ರತಂಡವನ್ನು ಬೆದರಿಸಿದ್ದಳು.
ಕಂಗನಾ ಹೇಳಿಕೆ ಕುರಿತು, ಮುಂಬೈ ಪೋಲಿಸ್ ಠಾಣೆಗೆ ದೂರು ನೀಡಿರುವ ಮಹಾರಾಷ್ಟ ಎಎಪಿ ನಾಯಕಿ ಪ್ರೀತಿ ಶರ್ಮ ಅವರು ದೇಶ ದ್ರೋಹ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿದ್ದಾರೆ.
ಸದಾ ಹೀಗೆ ಹುಚ್ಚಾಟ ನಡೆಸುವ ಈ ಗುಂಗುರು ಕೂದಲಿನ ಬೆಡಗಿ ಮೋದಿ ಮತ್ತು ಬಿಜೆಪಿ ಅಂಧಣಕ್ತೆ ಎಂಬುದಂತೂ ಸತ್ಯ.