ಮಂಡ್ಯದಲ್ಲಿ (mandya) ರಾಹುಲ್ ಗಾಂಧಿಯವರನ್ನು (Rahul gandhi) ಕರೆಸಿ, ದೊಡ್ಡ ಸಮಾವೇಶ ಆಯೋಜನೆ ಮಾಡಿದ್ದ ಕಾಂಗ್ರೆಸ್ (congress) ಭರ್ಜರಿ ಮತ ಬೇಟೆಗೆ ಮುಂದಾಗಿದೆ . ಇದೇ ವೇದಿಕೆಯ ಮೇಲೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಕುಮಾರಸ್ವಾಮಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂಬ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star chandru) ಪರವಾಗಿ ಮತಯಾಚನೆ ಮಾಡುವ ವೇಳೆ ಭಾಷಣ ಆರಂಭಿಸಿದ ಡಿಕೆ ಶಿವಕುಮಾರ್ , ಮತ್ತೆ ಎಚ್ ಡಿ ಕುಮಾರಸ್ವಾಮಿ (Kumaraswamy) ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ರಾಮನಗರದ (Ramanagar) ಜನ ನಿಮ್ಮನ್ನ ಶಾಸಕರನ್ನಾಗಿ ,ಸಂಸದರನ್ನಾಗಿ ,ಮುಖ್ಯಮಂತ್ರಿಯನ್ನಾಗಿ ಮಾಡಿದ್ರು. ಅವರನ್ನು ಬಿಟ್ಟು ಈಗ ಮಂಡ್ಯ ಕ್ಷೇತ್ರಕ್ಕೆ ಬಂದಿದ್ದೀರಿ ಮಂಡ್ಯ ಕ್ಷೇತ್ರದ ಜನರ ಕಿವಿ ಮೇಲೆ ಹೂವಿಡೋದಕ್ಕೆ ಸಾಧ್ಯ ಇಲ್ಲ . ನಾವು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಅಂತ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಡಿಕೆಶಿ ಅಬ್ಬರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (siddaramiah) ಕೂಡ ನಾನು ಮಂಡ್ಯ ಜನರಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡಿಕೊಳ್ಳುತ್ತೇನೆ, ಶತಾಯಗತಾಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ (mandya) ಮತದಾರರು ಕುಮಾರಸ್ವಾಮಿಯನ್ನು ತಿರಸ್ಕರಿಸಬೇಕು . ಸೋಲಿನ ರುಚಿ ತೋರಿಸಿ ಮನೆಗೆ ಕಳುಹಿಸಬೇಕು ಅಂತ ಮಂಡ್ಯ ಜನರ ಬಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಮತಯಾಚಿಸಿದರು.
ಒಟ್ಟಾರೆ ಒಂದು ಕಡೆ ಸ್ಟಾರ್ ಚಂದ್ರು ಅಬ್ಬರದ ಪ್ರಚಾರ ಮತ್ತೊಂದು ಕಡೆ ಕುಮಾರಸ್ವಾಮಿಯನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರ ಹಠ ಮಂಡ್ಯ ಲೋಕಸಭಾ ಕ್ಷೇತ್ರವನ್ನ ರಣಕಣವನ್ನಾಗಿ ಬದಲಾಯಿಸಿದೆ ಮಂಡ್ಯ ಜನರ ನಿರ್ಧಾರ ಏನು ಎಂಬುದು ಜೂನ್ ನಾಲ್ಕರಂದು ತಿಳಿಯಲಿದೆ.