BBMP ವಾರ್ಡ್ ಪುನರ್ವಿಂಗಡಣೆಯಲ್ಲಿ ಲೋಪದೋಷವಾಗಿದೆ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಹಲವು ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ.
ಅತ್ತ ಆಡಳಿತ ಪಕ್ಷದವರಿಗೆ ಅನುಕೂಲವಾಗುವಂತೆ ಕಾನೂನು ಬಾಹಿರವಾಗಿ ವಾರ್ಡ್ಗಳನ್ನು ಪುನರ್ವಿಂಗಡಿಸಲಾಗಿದೆ. ಅವೈಜ್ಞಾನಿಕವಾಗಿ ವಾರ್ಡ್ಗಳ ಗಡಿ ಬದಲಿಸಲಾಗಿದೆ ಎಂದು ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರೆ. ಇತ್ತ ವಿರೋಧ ಪಕ್ಷದ ಶಾಸಕರಿರುವ ವಾರ್ಡ್ ಸಂಖ್ಯೆ ಕಡಿಮೆ ಮಾಡಲಾಗಿದೆ. ಆಡಳಿತ ಪಕ್ಷದ ಶಾಸಕರಿರುವ ವಾರ್ಡ್ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಪರ ವಕೀಲ ಎಸ್.ಪೊನ್ನಣ್ಣ ವಾದ ಮಂಡಿಸುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ ಪುನರ್ ವಿಂಗಡನೆ ಕರಡು ಪ್ರಕಟವಾಗಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಎಲ್ಲ 243 ವಾರ್ಡ್ಗಳಿಗೂ ಮತದಾರರನ್ನು ವಿಂಗಡನೆ ಮಾಡಲಾಗಿದೆ. ನಗರದ ಹೊರವಲಯದ ಕ್ಷೇತ್ರಗಳಲ್ಲಿ ಹೆಚ್ಚು ವಾರ್ಡ್ಗಳು ಸೇರ್ಪಡೆಯಾಗಿವೆ. ಎಲ್ಲ ವಾರ್ಡ್ಗಳ ನಕಾಶೆಗಳನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ. ಎಲ್ಲ ವಾರ್ಡ್ಗಳಿಗೂ ಸಾರ್ವಜನಿಕರ ಭಾವನೆ ಆಧರಿಸಿ ನಾಮಕರಣ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಹೇಳಿದರು.