ಮುಂಬರುವ ಟಿ-20 ವಿಶ್ವಕಪ್ ಗೆ 20 ಸಂಭಾವ್ಯ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಟಿ-20 ಪಂದ್ಯದ ವೇಳೆ ಮಾತನಾಡಿದ ಅವರು, ಕಳೆದ 7-8 ತಿಂಗಳಲ್ಲಿ ಸಾಕಷ್ಟು ಯುವ ಆಟಗಾರರ ಪ್ರದರ್ಶನ ಗಮನಿಸಿದ್ದೇವೆ. ಈಗ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದರು.
ಕಳೆದ 8 ತಿಂಗಳಲ್ಲಿ 6 ನಾಯಕರನ್ನು ಭಾರತ ತಂಡ ನೋಡುವಂತಾಗಿದೆ. ಆದರೆ ಇದು ನಾನು ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ಇದನ್ನು ನಿರೀಕ್ಷಿಸಿರಲಿಲ್ಲ ಎಂದರು.
ಕೋವಿಡ್, ಪಂದ್ಯಗಳ ಸಂಖ್ಯೆ, ಆಟಗಾರರ ಉಪಸ್ಥಿತಿ, ಆಟಗಾರರ ಮೇಲಿನ ಒತ್ತಡ ಹೀಗೆ ಹಲವು ವಿಷಯಗಳನ್ನು ಆಧರಿಸಿ ಆಯಾ ಸಂದರ್ಭಕ್ಕೆ ತಕ್ಕಂತೆ ಆಟಗಾರರು ಹಾಗೂ ನಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ದ್ರಾವಿಡ್ ವಿವರಿಸಿದರು.
ಇದು ನಿರೀಕ್ಷಿಸಲಾಗದ ಬೆಳವಣಿಗೆ, ಒಂದು ರೀತಿಯಲ್ಲಿ ತಮಾಷೆಯ ವಿಷಯ ಕೂಡ ಹೌದು, ನಾನು ಕಳೆದ ೮ ತಿಂಗಳಿನಿಂದ ಹೊಸ ಹೊಸ ವಿಷಯ ಕಲಿಯುತ್ತಿದ್ಧೇನೆ. ಹೆಚ್ಚು ಆಟಗಾರರು ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಹೆಚ್ಚು ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರಿಂದ ಪ್ರತಿ ಬಾರಿಯೂ ಹೊಸ ಪ್ರಯೋಗ ಮಾಡುವಂತಾಗಿದೆ ಎಂದು ಅವರು ವಿವರಿಸಿದರು.