ಸಿಎಂ ಸಿದ್ದರಾಮಯ್ಯ (Cm siddaramaiah)ವಿರುದ್ಧ ಮುಡಾ ಹಗರಣ (Muda scam) ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಸ್ನೇಹಮಯಿ ಕೃಷ್ಣ (Snehamayi krishna) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ (Highcourt) ನಡೆಯಲಿದೆ.ಹೀಗಾಗಿ ಈ ಪ್ರಕರಣದಲ್ಲಿ ಇಷ್ಟೂ ದಿನಗಳ ತನಿಖೆ ನಡೆಸಿ ಪ್ರಾಥಮಿಕ ವರದಿ ತಯಾರಿ ಮಾಡಿರುವ ಲೋಕಾಯುಕ್ತ ಪೊಲೀಸರು (Lokayukta police) ಇಂದು ಕೋರ್ಟ್ ಮುಂದೆ ವರದಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆ ನಡೆಸಿ ವರದಿ ತಯಾರಿ ಮಾಡಲು ಮುಂದಾಗಿದ್ದಾರೆ.
ಇಂದು ಹೈಕೋರ್ಟ್ ಗೆ ಲೋಕಾಯುಕ್ತ ತನಿಖಾ ವರದಿ ನೀಡಬೇಕಿದೆ. ಎಫ್ ಐ ಆರ್ ಆದ ಬಳಿಕ ಇಲ್ಲಿಯವರೆಗೆ ತನಿಖೆಯಲ್ಲಿ ಏನೇನು ಆಗಿದೆ. ತನಿಖಾ ಸಂದರ್ಭದಲ್ಲಿ ಯಾವ ಆರೋಪಿಗಳ ವಿಚಾರಣೆ ನಡೆದಿದೆ ಎಂಬುದರ ಬಗ್ಗೆ ವರದಿ ನೀಡಬೇಕಿದೆ.ಮತ್ತೊಂದೆಡೆ ಈ ಪ್ರಕರಣ ಸಿಬಿಐಗೆ ನೀಡಲು ದೂರುದಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ಅಲ್ಲಿ ವಿಚಾರಣೆಗೆ ಬರಲಿದೆ.
ಹೀಗಾಗಿ ತನಿಖಾದಿಖಾರಿಗಳು ಸಂಪೂರ್ಣ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಕೆ ಮಾಡಿದ್ದು, ಮೈಸೂರು ಲೋಕಾಯುಕ್ತ ಪೊಲೀಸರಿಂದ ಐಜಿಪಿಗೆ ವರದಿ ಸಲ್ಲಿಕೆಯಾಗಿದೆ. ಅಧಿಕಾರಿಗಳು ನೀಡಿರುವ ವರದಿಯನ್ನ IGP ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗಿದೆ. ಇಂದು ಹೈಕೋರ್ಟ್ ಗೆ ಸರ್ಕಾರಿ ವಕೀಲರ ಮೂಲಕ ಲೋಕಾ ಪೊಲೀಸರು ವರದಿ ಸಲ್ಲಿಸಬೇಕಿದೆ.