ಮುಡಾ (MUDA) ಅಕ್ರಮ ನಿವೇಶನ ಹಂಚಿಕೆಯ ಅಕ್ರಮದಲ್ಲಿ ಸದ್ಯ ಸಿಲುಕಿರೋ ಸಿಎಂ ಸಿದ್ದರಾಮಯ್ಯಗೆ (Cm siddaramaiah) ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾದಿಂದ 50:50 ಅನುಪಾತದಲ್ಲಿ 14 ಸೈಟ್ ಹಂಚಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿದ್ದರಾಮಯ್ಯಗೆ ಲೋಕಾಯುಕ್ತ (Lokayukta) ನೋಟಿಸ್ ಜಾರಿ ಮಾಡಿದೆ.
ಮುಡಾ ಪ್ರಕರಣದ A1 ಸಿಎಂ ಸಿದ್ದರಾಮಯ್ಯ ಆಗಿರುವುದರಿಂದ, ನವೆಂಬರ್ 6ರಂದು ಬೆಳಗ್ಗೆ 10.30ಕ್ಕೆ ಮೈಸೂರಿನ ಲೋಕಾಯುಕ್ತ (Mysuru lokayuktha) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಅಂತ ನೋಟಿಸ್ ಜಾರಿ ಮಾಡಿದೆ. ಮುಡಾ ಸೈಟ್ ಪಡೆದ ಪ್ರಕರಣದಲ್ಲಿ ಈಗಾಗಲೇ 2ನೇ ಆರೋಪಿ, ಮೂರನೇ ಆರೋಪಿ, ನಾಲ್ಕನೇ ಆರೋಪಿಗೆ ವಿಚಾರಣೆ ನಡೆಸಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಎ1 ಆಗಿದ್ದು, ಇದೀಗ ಲೋಕಾಯುಕ್ತ ಎಸ್ಪಿ ಟಿ.ಜೆ, ಉದೇಶ್ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ. ಈ ಕುರಿತು ಹಾವೇರಿಯಲ್ಲಿ ಸಿದ್ದರಾಮಯ್ಯ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ವಿಚಾರಣೆಗೆ ಹಾಜರಾಗುತ್ತಿನಿ ಎಂದಿದ್ದಾರೆ.