ಬೆಂಗಳೂರು: ನಗರದ 6 RTO ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಗರದ RTO ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರ ದೂರುಗಳ ಹಿನ್ನೆಲೆ ಇಂದು ಮಧ್ಯಾಹ್ನದಿಂದ ಯಲಹಂಕ, ಜಯನಗರ ಇಂದಿರಾನಗರ, ರಾಜಾಜಿನಗರ ಸೇರಿ ಆರು ಆರ್ ಟಿಓ ಕಚೇರಿಗಳ ಮೇಲೆ
ಲೋಕಾಯುಕ್ತ ಮತ್ತು ಇಬ್ಬರು ಉಪಲೋಕಾಯುಕ್ತರು 8 DySP, 2 SP, 14 ಇನ್ಸ್ಪೆಕ್ಟರ್ ಗಳು, 6 ನ್ಯಾಯಾಂಗ ಅಧಿಕಾರಿಗಳಿಂದ ದಾಳಿ ನಡೆದಿದ್ದು ಪರಿಶೀಲನೆ ನಡೆದಿದೆ.

ಇನ್ನು ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಯಶವಂತಪುರ ಮತ್ತು ರಾಜಾಜಿನಗರ RTO ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,
RTO ಕಚೇರಿಗಳಲ್ಲಿ ಆಡಳಿತ ವೈಫಲ್ಯದ ಬಗ್ಗೆ ದೂರು ಬಂದಿದ್ದರಿಂದ ಪರಿಶೀಲನೆ ನಡೆಸಿದ್ದೇವೆ.. ರಾಜಾಜಿನಗರದ RTO ಕಚೇರಿಯಲ್ಲಿ 3,800 ಡಿಎಲ್ ಸ್ಮಾರ್ಟ್ ಕಾರ್ಡ್, 6300 ಆರ್ ಸಿ ಕಾರ್ಡ್ ಪೆಂಡಿಂಗ್ ಇದೆ. 20 ದಿವಸದಿಂದ ಪ್ರಿಂಟಿಂಗ್ ವರ್ಕ್ ಆಗ್ತಿಲ್ಲ. ಇದಕ್ಕೆ RTO ಅಧಿಕಾರಿಗಳು ಹೊರಗುತ್ತಿಗೆ ಕಂಪನಿಯಿಂದ ಸಮಸ್ಯೆ ಆಗಿದೆ ಎನ್ನುತ್ತಿದ್ದಾರೆ. ಆದರೆ ಜನರಿಗೆ ನಾವು ಸೇವೆ ಕೊಡಬೇಕಿದೆ

10,000 ಜನರಿಗೆ ಇದರಿಂದ ಕಿರುಕುಳ ಆದಂತಾಗಿದೆ..
ಹೀಗಾಗಿ ವಿವರಣೆ ಕೊಡಲು ಕೇಳಿದ್ದೇವೆ.
ಇನ್ನು ಹಲವಾರು ಜೆರಾಕ್ಸ್ ಅಂಗಡಿಗಳು ನಾವು ಬರ್ತಿವಿ ಅಂತ ಗೊತ್ತಾದ ತಕ್ಷಣ ಬಾಗಿಲು ಹಾಕಿ ಓಡಿ ಹೋಗಿದ್ದಾರೆ. ಇದು ಅಕ್ರಮ ಕೆಲಸ ನಡೆಯುತ್ತಿದೆ ಎಂದು ತೋರಿಸುತ್ತಿದೆ.
ಯಶವಂತಪುರದಲ್ಲೂ 30 ಕಚೇರಿಗಳು ಬೀಗ ಹಾಕಿ ಹೋಗಿದ್ದರು. ಇದರ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ
ಅಂಗಡಿಯವರು ಮತ್ತು RTO ದವರನ್ನ ಕರೆಸಿ ಈ ಪಿಡುಗೆಗೆ ಏನು ಉತ್ತರ ಕೊಡ್ತಾರೆ ನೋಡ್ತಿವಿ ಎಂದು ತಿಳಿಸಿದರು.


