ಬೆಂಗಳೂರು: ಕರ್ನಾಟಕ ಗ್ರಾಮೀಣ ಕೈಗಾರಿಕಾ ಅಭಿವೃದ್ದಿ ನಿಗಮದ(Karnataka Rural Infrastructure Development Limited) ಮೇಲೆ ಲೋಕಾಯುಕ್ತ ಪೊಲೀಸರು ಇಂದು ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

2019/2020 ರಲ್ಲಿ ಕಾಮಗಾರಿಯೇ ಮಾಡದೇ ಬಿಲ್ ಮಂಜೂರು ಮಾಡಿರುವ ಆರೋಪದ ಜೊತೆಗೆ ಕಾಂಟ್ರ್ಯಾಕ್ಟರ್ ನಾಗರಾಜು ಎಂಬಾತನಿಗೆ UTR PAYMENT ಮಾಡುವ ಸಂದರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಿಲ್ ಪಾಸ್ ಮಾಡಿರುವ ಆರೋಪದ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆದಿದ್ದಾರೆ.

ಲೋಕಾಯುಕ್ತ SP 1 ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಒಟ್ಟು ನಾಲ್ಕು ಜನ AEE ಸೇರಿದಂತೆ ಕಾಂಟ್ರ್ಯಾಕ್ಟರ್ ನಾಗರಾಜುಗೆ ಸಂಬಂಧಿಸಿದಂತೆ ಕಚೇರಿ, ಮನೆಯಲ್ಲಿ ಶೋಧ ನಡೆದಿದೆ.ಆದರೆ ನಾಲ್ಕು ಜನರಲ್ಲಿ ಇಬ್ಬರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ.











