ಮೈಸೂರಿನ ಮುಡಾ ಅಕ್ರಮ (MUDA scam) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುತ ತನಿಖೆ ಪೂರ್ಣಗೊಂಡಿದ್ದು, ಜನವರಿ 25 ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ. ಆದ್ರೆ ಇದೀಗ ಈ ವರದಿಯ ಬಗ್ಗೆ ಚರ್ಚೆಗಳು ಗರಿಗೆದರಿದ್ದು, ಲೋಕಾಯುಕ್ತ (Lokayukta) ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ (Cm siddaramaiah) ಮತ್ತು ಅವರ ಪತ್ನಿ ಪಾರ್ವತಿಗೆ ಕ್ಲೀನ್ ಚಿಟ್ (Clean chit) ನೀಡಲಾಗಿದೆ ಎಂಬ ಆಂತರಿಕ ಮಾಹಿತಿಗಳು ಹರಿದಾಡುತ್ತಿವೆ.
ಹೌದು, ಮುಡಾ ಪ್ರಕರಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ (Cm siddaramaiah) ಮತ್ತು ಅವರ ಪತ್ನಿ ಪಾರ್ವತಿಯವರ ಯಾವುದೇ ಲೋಪಗಳಿಲ್ಲ. ಬದಲಾಗಿ ಈ ಪ್ರಕರಣದಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ ಎಂದು ಲೋಕಾಯುಕ್ತ ವರದಿ ನೀಡಲಿದೆ ಎನ್ನಲಾಗಿದೆ. ಹೀಗಾಗಿ ಈ ವರದಿ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಮತ್ತೊಂದೆಡೆ, ಸಿಬಿಐ (CBI) ತನಿಖೆಗೆ ಕೋರಿ ಕೋರ್ಟ್ ಗೆ ಮನವಿ ಸಲ್ಲಿಸಿದ್ದ ಸ್ನೇಹಮಯಿ ಕೃಷ್ಣ ಅವರ ಅರ್ಜಿ ವಿಚಾರಣೆ ನಡೆದಿದ್ದು, ಜನವರಿ 27ರಂದು ಎ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ.