ಬೆಂಗಳೂರು (Bengaluru): 2024 ರ ಲೋಕಸಭಾ ಚುನಾವಣೆಯನ್ನು (Loksabha Election) ಈ ಬಾರಿ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ (BJP-JDS) ಮೈತ್ರಿಯಾಗಿ ಎದುರಿಸುತ್ತಿದೆ.
ನಿನ್ನೆ ಸಂಜೆ ಬಿಡುಗಡೆಯಾದ 2ನೇ ಪಟ್ಟಿಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟು, 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಹೈಕಮಾಂಡ್ ಕಣಕ್ಕಿಳಿಸುತ್ತಿದೆ.

ಆ 25 ರ ಪೈಕಿ ನಿನ್ನೆ 20 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ. ಹಾಗಾದ್ರೆ, ಬಾಕಿಯಿರುವ ಆ 5 ಕ್ಷೇತ್ರಗಳು ಯಾವುವು? ಆ 5 ಕ್ಷೇತ್ರಗಳ ಟಿಕೆಟ್ ಏಕೆ ಘೋಷಣೆಯಾಗಿಲ್ಲ? ಪ್ರತಿಧ್ವನಿ ಬಳಿಯಿದೆ ಆ 5 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗದ ಕಥೆ.
28 ಕ್ಷೇತ್ರದ ಪೈಕಿ 25 ರಲ್ಲಿ ಬಿಜೆಪಿ ಸ್ಫರ್ಧಿಸಲಿದ್ದು, 3 ಕ್ಷೇತ್ರಗಳಲ್ಲಿ ಜೆಡಿಎಸ್ ಆಖಾಡಕ್ಕೆ ಎಂಟ್ರಿ ಕೊಡಲಿದೆ. ಆ 25 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ, 5 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.
ಉತ್ತರ ಕನ್ನಡ, ಬೆಳಗಾವಿ, ರಾಯಚೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್ ಘೋಷಿಸಿಲ್ಲ.
ಈ 5 ಕ್ಷೇತ್ರಗಳಿಗೆ ಮಾತ್ರ ಏಕೆ ಘೋಷಣೆ ಆಗಿಲ್ಲ ಟಿಕೆಟ್? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಈ ಮೇಲೆ ಹೇಳಿರುವ 5 ಕ್ಷೇತ್ರಗಳಿಗೆ ಏಕೆ ಟಿಕೆಟ್ ಘೋಷಣೆ ಆಗಿಲ್ಲ?
- ಕ್ಷೇತ್ರದಲ್ಲಿ ಇನ್ನು ಕೂಡ ಕೆಲ ಪ್ರಬಲರು ಟಿಕೆಟ್‌ಗಾಗಿ ಹೈಕಮಾಂಡ್ ನಾಯಕರು ಮೊರೆ ಹೋಗುತ್ತಿರುವುದು.
- ಸಮುದಾಯದ ಆಧಾರದ ಮೇಲೆ ಒಂದಷ್ಟು, ಲೆಕ್ಕಾಚಾರ ಆಗಬೇಕಿದೆ.
- ಎದುರಾಳಿ ಪಕ್ಷಗಳಿಂದ ಯಾರ್ಯಾರು ಅಭ್ಯರ್ಥಿಗಳಾಗುತ್ತಾರೆ?
4. ಏಕಾಏಕಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಘೋಷಿಸುವ ಬದಲು, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವ ಪ್ಲಾನ್. - ಇದೆಲ್ಲದರ ಮಧ್ಯೆ, ಆಯಾ ಕ್ಷೇತ್ರದ ಸ್ಥಳೀಯ ನಾಯಕರ ಸಹಮತ ಸಿಕ್ಕಿಲ್ಲ ಎಂಬ ಕಾರಣಕ್ಕೆ.
ಹೀಗೆ ಸಾಲು ಸಾಲು ಕಾರಣಗಳನ್ನು ಮುಂದಿಟ್ಟುಕೊಂಡು 5 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿರುವ ಹೈಕಮಾಂಡ್.
#karnataka #bengaluru #loksabhaelection #bjp #jds