ನವದೆಹಲಿ (Newdelhi): ಲೋಕಸಭಾ ಚುನಾವಣೆ (Loksabha Election) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಕ್ಷಿಣ ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಐದು ದಿನಗಳ ಪ್ರವಾಸ ಹಾಕಿಕೊಂಡಿರುವ ಪ್ರಧಾನಿ ಮೋದಿ ಅವರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 15ರಿಂದ 19ರವರೆಗಿನ ಮೋದಿ ಅವರ ಪ್ರವಾಸದ ತಾತ್ಕಾಲಿಕ ಪಟ್ಟಿ ತಯಾರಾಗಿದೆ.

ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಮೋದಿ ಪ್ರವಾಸ ಕೈಗೊಳ್ಳಲಿರುವ ಮೋದಿ ಕರ್ನಾಟಕದಿಂದಲೇ ಪ್ರವಾಸ ಆರಂಭಿಸಲಿದ್ದಾರೆ.
ನಾಲ್ಕು ದಿನ ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಮಾರ್ಚ್ 15ರಂದು ಬೆಂಗಳೂರಿಗೆ ಆಗಮಿಸಿ, ಕೋಲಾರ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅನ್ವಯ ಆಗುವಂತೆ ಚುನಾವಣಾ ಪ್ರಚಾರ ಮಾಡಲಿದ್ದು, ಮಾರ್ಚ್ 17ರಂದು ಶಿವಮೊಗ್ಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಅನ್ವಯವಾಗುವಂತೆ ಕಾರ್ಯಕ್ರಮ ಇರಲಿದೆ.
ಮಾರ್ಚ್ 18ರಂದು ಬೀದರ್ ಗೆ ಮೋದಿ ಆಗಮಿಸಲಿದ್ದಾರೆ. ಬೀದರ್, ಕಲಬುರಗಿಗೆ ಅನ್ವಯ ಆಗುವಂತೆ ಕಾರ್ಯಕ್ರಮ ಆಯೋಜನೆ. ಮಾರ್ಚ್ 19ರಂದು ಧಾರವಾಡಕ್ಕೆ ಭೇಟಿ, ಧಾರವಾಡ, ಹಾವೇರಿ, ಬೆಳಗಾವಿಗೆ ಅನ್ವಯ ಆಗುವಂತೆ ಕಾರ್ಯಕ್ರಮ ಆಯೋಜನೆಯಾಗಲಿದೆ.
#karnataka #loksabhaelection #narendramodi #modi #Campaign