ನವದೆಹಲಿ (Newdelhi): 2024ರ ಲೋಕಸಭಾ ಚುನಾವಣೆಗೆ (Loksabha Election) ಕಾಂಗ್ರೆಸ್ ನ (Congress) ಮೊದಲ ಪಟ್ಟಿ ಬಿಡುಗಡೆಯಾಗಿದೆ.
ಮೊದಲ ಪಟ್ಟಿಯಲ್ಲೇ ಗೀತಾ ಶಿವರಾಜ್ ಕುಮಾರ್ ಗೆ (Geetha Shivarajkumar) ಟಿಕೆಟ್ ಸಿಕ್ಕಿದೆ. ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ.

ಗೀತಾ ಶಿವರಾಜ್ ಕುಮಾರ್ ಅವರು ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ (B.S.Yediyurappa) ವಿರುದ್ಧ ಸ್ಫರ್ಧಿಸಿದ್ದ ಗೀತಾ ಅವರು, ಬರೋಬ್ಬರಿ 3.25 ಲಕ್ಷ ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ರು.
ಈಗ 10 ವರ್ಷದ ಬಳಿಕ ಸಹೋದರ, ಸಚಿವ ಮಧು ಬಂಗಾರಪ್ಪ ಅವರ (Madhu Bangarappa) ಬೆಂಬಲದೊಂದಿಗೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಡಿ.ಕೆ.ಸುರೇಶ್‌ಗೆ (D.K.Suresh) ಬೆಂಗಳೂರು ಗ್ರಾಮಾಂತರ, ಸ್ಟಾರ್ ಚಂದ್ರುಗೆ (Star Chandru) ಮಂಡ್ಯ, ಎಸ್.ಪಿ.ಮುದ್ದುಹನುಮೇಗೌಡರಿಗೆ (S.P.Muddu Hanume Gowda) ತುಮಕೂರು, ಶ್ರೇಯಸ್ ಪಟೇಲ್ ಗೆ (Shreyas Patel) ಹಾಸನ, ರಾಜು ಆಲಗೂರು ವಿಜಯಪುರ, ಆನಂದ್ ಸ್ವಾಮಿ ಗಡ್ಡದೇವರಮಠ ಹಾವೇರಿಯಿಂದ ಟಿಕೆಟ್ ನೀಡಲಾಗಿದೆ.
ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಥತೆ ನಡೆಸಿರುವ ಕಾಂಗ್ರೆಸ್ ರಾಜ್ಯದ ಏಳು ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K.C.Venugopal) ಅವರು ವಿವಿಧ ರಾಜ್ಯಗಳ 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 7 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ತಾತ್ಕಾಲಿಕವಾಗಿ ತಡೆ ಹಿಡಿಯಲಾದ ಕರ್ನಾಟಕ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು
ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ, ಚಿತ್ರದುರ್ಗ ಬಿ.ಎನ್ ಚಂದ್ರಪ್ಪ.
#newdelhi #loksabhaelection #congress #congressfirstlist #geethashivarajkumar #karnataka #shivamogga