ಬೆಂಗಳೂರು (Bengaluru): 2024 ರ ಲೋಕಸಭಾ ಚುನಾವಣೆಗೆ (Loksabha Election) ಬಿಜೆಪಿ (BJP) ಹೈಕಮಾಂಡ್ ನಾಯಕರು ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ತಮಗೆ ಅವಕಾಶ ಸಿಗಲಿಲ್ಲವೆಂದು ಜಗದೀಶ್ ಶೆಟ್ಟರ್ (Jagadish Shettar), ಕೆ. ಎಸ್.ಈಶ್ವರಪ್ಪ (K.S.Eshwarappa) ಅವರು ಕಂಗಾಲಾಗಿದ್ದಾರೆ.
ಎರಡನೇ ಪಟ್ಟಿಯಲ್ಲಿ 72 ಮಂದಿಯ ಹೆಸರನ್ನು ಘೋಷಿಸಿದ ಬಿಜೆಪಿ, ಅದರಲ್ಲಿ ರಾಜ್ಯದ 20 ಮಂದಿಯ ಹೆಸರನ್ನು ಘೋಷಿಸಿದೆ.
ಅದರಲ್ಲಿ ಮಾಜಿ ಡಿಸಿಎಂ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪರ ಪುತ್ರ ಕಾಂತೇಶ್ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರು ಇಲ್ಲ. ನಿರೀಕ್ಷಿಸಿದ್ದ ಅವಕಾಶ ಸಿಗದೇ ಜಗದೀಶ್ ಶೆಟ್ಟರ್, ಕೆ. ಎಸ್.ಈಶ್ವರಪ್ಪ ಕಂಗಾಲಾಗಿದ್ದಾರೆ.

ಜಗದೀಶ್ ಶೆಟ್ಟರ್ ಧಾರವಾಡ ಲೋಕಸಭಾ ಕ್ಷೇತ್ರದ ಬೇಡಿಕೆ ಇಟ್ಟಿದ್ದರು. ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ-ಗದಗ ಕ್ಷೇತ್ರದ ಬೇಡಿಕೆಯಿಟ್ಟಿದ್ದರು. ಆದರೆ ಕೊನೆ ಕ್ಷಣದಲ್ಲಿ ಈ ಇಬ್ಬರು ನಾಯಕರಿಗೂ ಅವಕಾಶ ತಪ್ಪಿದೆ.
ಹಾಗಾದ್ರೆ, ಜಗದೀಶ್ ಶೆಟ್ಟರ್, ಕೆ. ಎಸ್.ಈಶ್ವರಪ್ಪರ ಮುಂದಿರುವ ಆಯ್ಕೆಗಳಾದ್ರೂ ಏನೇನು?
ಪ್ರತಿಧ್ವನಿ ಉಭಯ ನಾಯಕರ ಮುಂದಿರುವ ಆಯ್ಕೆಗಳ ಪಟ್ಟಿಯನ್ನ ತಿಳಿಸುತ್ತಿದೆ.

ಮೊದಲಿಗೆ ಜಗದೀಶ್ ಶೆಟ್ಟರ್ ಅವರ ಆಯ್ಕೆಗಳನ್ನು ನೋಡುವುದಾದ್ರೆ
- ಜಗದೀಶ್ ಶೆಟ್ಟರ್ ಬೇಡಿಕೆಯಿಟ್ಟಿದ್ದು ಧಾರವಾಡ ಕ್ಷೇತ್ರವನ್ನ. ಆದ್ರೆ ಧಾರವಾಡ ಹಾಲಿ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪಾಲಾಗಿದೆ.
- ಧಾರವಾಡ ಕ್ಷೇತ್ರ ಮಿಸ್ ಆದ್ರೆ ಹಾವೇರಿ-ಗದಗ ಕ್ಷೇತ್ರದ ಬೇಡಿಕೆ ಇಟ್ಟಿದ್ದ ಜಗದೀಶ್ ಶೆಟ್ಟರ್. ಈಗ ಅದು ಮಿಸ್ ಆಗಿ, ಬಸವರಾಜ ಬೊಮ್ಮಾಯಿ ಅವರ ತೆಕ್ಕೆಗೆ ಹೋಗಿದೆ.
3. ಇನ್ನು ಈಗ ವಿಧಿಯಿಲ್ಲದೇ, ಒಲ್ಲದ ಮನಸ್ಸಿನಿಂದಲೇ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಬೇಕು. ಹಾಲಿ ಜಗದೀಶ್ ಶೆಟ್ಟರ್ ಅವರ ಬೀಗರೇ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಅಲ್ಲಿರುವ ಒಂದಷ್ಟು ಸಮಸ್ಯೆಗಳಿಗೆ ಮದ್ದೇರೆದುಕೊಂಡು ಕಣಕ್ಕಿಳಿಯಬೇಕು. - ಇಲ್ಲವಾದ್ರೆ, ಚುನಾವಣೆಯ ಸಹವಾಸವೇ ಬೇಡ ಎಂದು ಸುಮ್ಮನಾಗಬೇಕು.
- ಧಾರವಾಡ ಕ್ಷೇತ್ರ ಮಿಸ್ ಆದ್ರೆ ಹಾವೇರಿ-ಗದಗ ಕ್ಷೇತ್ರದ ಬೇಡಿಕೆ ಇಟ್ಟಿದ್ದ ಜಗದೀಶ್ ಶೆಟ್ಟರ್. ಈಗ ಅದು ಮಿಸ್ ಆಗಿ, ಬಸವರಾಜ ಬೊಮ್ಮಾಯಿ ಅವರ ತೆಕ್ಕೆಗೆ ಹೋಗಿದೆ.
ಇನ್ನು ಕೆ.ಎಸ್.ಈಶ್ವರಪ್ಪರದ್ದು ಮತ್ತೊಂದು ಕಥೆ.
- ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ಗೆ ಬೇಡಿಕೆಯಿಟ್ಟಿದ್ದು ಹಾವೇರಿ-ಗದಗ ಕ್ಷೇತ್ರವನ್ನ.
- ಅದು ಈಗ ಬಸವರಾಜ ಬೊಮ್ಮಾಯಿ ಅವರ ಪಾಲಾಗಿದೆ.
- ಯಡಿಯೂರಪ್ಪ ನಮಗೆ ಅನ್ಯಾಯ ಮಾಡಿದ್ದಾರೆ ಎನ್ನುತ್ತಿರುವ ಈಶ್ವರಪ್ಪ, ತಾವೇ ಖುದ್ದು ಪಕ್ಷೇತರರಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯಲು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.
- ಒಂದು ಈಗಾಗಲೇ ಸಕ್ರಿಯ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿ ತಾವು ಮತ್ತೆ ಚುನಾವಣೆಗೆ ಸ್ಫರ್ಧೆ ಮಾಡಿದ್ರೆ ಗೌರವ ಇರುತ್ತಾ? ಎಂಬುದನ್ನು ಅವರೇ ಯೋಚಿಸಬೇಕು.
- ಒಂದು ವೇಳೆ ಅವರು ಸ್ಫರ್ಧೆ ಮಾಡಿದ್ರೂ, ಆಗುವ ಸಾಧಕ- ಬಾಧಕಗಳನ್ನು ಬಿಜೆಪಿ ಅಳೆದುತೂಗಿ ಲೆಕ್ಕಾಚಾರ ಹಾಕಿಯೇ ಹಾಕುತ್ತದೆ.
- ಇದು ಈಶ್ವರಪ್ಪರಿಗೆ ಈಗ ಬೇಡವಾಗಿರುವ ವಿಚಾರ.
- ಇದನ್ನೆಲ್ಲಾ ಬಿಟ್ಟು, ಈ ಚುನಾವಣೆಯಲ್ಲಿ ಏನೋ ಆಗಲಿಲ್ಲ. ಆದ್ರೆ, ಮುಂದೆ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮೇಲೆ ಈಗಿನಿಂದಲೇ ನಿಗಾವಹಿಸಲು ಸೂಚಿಸಿ, ಸಮುದಾಯದ ನಾಯಕರಾಗಿ ಬೆಳೆಯಬಹುದಾಗಿದೆ.
ಹೀಗೆ ಹಲವು ಆಯ್ಕೆಗಳನ್ನು ನಾಯಕರ ಮುಂದಿದ್ದು, ಮುಂದೆ ಅವರು ಯಾವ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೋ, ಅವರಿಗೆ ಬಿಟ್ಟಿದ್ದು.
#karnataka #bengaluru #loksabhaelection #bjp #kseshwarappa #jagdishshettar