ಕಾಂಗ್ರೆಸ್ (congress) ಆಂತರಿಕ ಅಸಮಾಧಾನ, ಭಿನ್ನಮತವನ್ನೇ ಬಂಡವಾಳ ಮಾಡಿಕೊಳ್ಳಲು ಜೆಡಿಎಸ್ ಬಿಜೆಪಿ (Jds-Bjp) ಟಾರ್ಗೆಟ್ ಹಾಕಿಕೊಂಡಂತಿದೆ.ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗುದಿದ್ದು, ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಕಡಿಮೆ ಸ್ಥಾನ ಬಂದರೆ ಪಕ್ಷದಲ್ಲಿ ಅಸಮಾಧನ ಸ್ಪೋಟಗೊಳ್ಳೋ ಸಾಧ್ಯತೆಗಳು ಕಂಡುಬರ್ತಿದ್ದು ಇದನ್ನೇ ಎನ್‌ಕ್ಯಾಶ್ (Encash) ಮಾಡಿಕೊಳ್ಳಲು ಮೈತ್ರಿ ನಾಯಕರು ಲೆಕ್ಕಾಚಾರದಲ್ಲಿದ್ದಾರೆ.

ಇನ್ನು ಕೆಲ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ (Cabinet) ಪುನರ್ ರಚನೆ ಆಗಲಿದೆ.ಈ ಸಂದರ್ಭದಲ್ಲಿ ಕೂಡ ಕಾಂಗ್ರೆಸ್ ನಲ್ಲಿ ಅಸಮಾಧಾನ ಅಥವಾ ಭಿನ್ನಮತ ಸ್ಪೋಟಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.ಈ ವೇಳೆ ಸರ್ಕಾರ ಪತನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ- ಜೆಡಿಎಸ್ ನಾಯಕರಿದ್ದಾರೆ.

ಲೋಕಸಭಾ ಫಲಿತಾಂಶದ ಬಳಿಕ ನಿಗೂಢ ನಾಯಕನ್ನೊಬ್ಬರ ರಾಜ್ಯ ಕಾಂಗ್ರೆಸ್ ನಲ್ಲಿ ಉದ್ಭವವಾಗಲಿದ್ದಾರೆ. ಆ ನಾಯಕ ಶಾಸಕರನ್ನ ಆಪರೇಷನ್ (Operation lotus) ಮಾಡಲಿದ್ದಾರೆ ಎಂದು ರಾಜ್ಯ ರಾಜಕಾರಣದಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಮಹಾರಾಷ್ಟ್ರ (Maharashtra)| ಮಾದರಿಯನ್ನು ಚುನಾವಣೆಯೇ ಇಲ್ಲದೆ ಹೊಸ ಸರ್ಕಾರದ ರಚನೆ ಮಾಡಲು ಕಮಲದಳ ನಾಯಕರು ಕನಸು ಕಾಣುತ್ತಿದ್ದಾರೆ. ಈ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ.