ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಕ್ಟೋಬರ್ 15 ಹಾಗೂ 16 (October 15th & 16th) ರಂದು ನಡೆಯಲಿರುವ ಎಸ್ಸಿಒ ಶೃಂಗಸಭೆ (SCO Summit) ಹಿನ್ನೆಲೆಯಲ್ಲಿ ಎರಡು ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ, ಮದುವೆಗಳಿಗೂ ನಿಷೇಧ ಹೇರಲಾಗಿದೆ. ಬೇರೆ ದೇಶಗಳಿಂದ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇಮ್ರಾನ್ ಖಾನ್ (PM Imran Khan) ಅವರ ಪಕ್ಷದ ಬೆಂಬಲಿಗರ ಇತ್ತೀಚಿನ ಭಯೋತ್ಪಾದಕ ದಾಳಿಗಳು ಮತ್ತು ರಾಜಕೀಯ ಪ್ರತಿಭಟನೆಗಳಿಂದಾಗಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ (Islamabad and Rawalpindi) ಮಿಲಿಟರಿ ನಿಯಂತ್ರಣದಲ್ಲಿ ಭದ್ರತೆಯನ್ನು ಇರಿಸಲು ಪಾಕಿಸ್ತಾನದ ಸರ್ಕಾರ ನಿರ್ಧರಿಸಿದೆ.
ಪಾಕಿಸ್ತಾನ ಸೇನೆಯ ಸುಮಾರು 10,000 ಸೈನಿಕರು ಮತ್ತು ಕಮಾಂಡೋಗಳನ್ನು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ (Islamabad and Rawalpindi) ನಿಯೋಜಿಸಲಾಗಿದೆ. ವರದಿಗಳ ಪ್ರಕಾರ, ಸ್ಥಳೀಯ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಈಗ ನೇರವಾಗಿ ಮಿಲಿಟರಿಯಿಂದ ಆದೇಶಗಳನ್ನು ತೆಗೆದುಕೊಳ್ಳುತ್ತವೆ.
ಅಕ್ಟೋಬರ್ 12 ರಿಂದ 16 (october 12th to 16th) ರವರೆಗೆ ಎರಡೂ ನಗರಗಳಲ್ಲಿ ಮದುವೆ ಹಾಲ್‌ಗಳು, ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ನೂಕರ್ ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ವ್ಯಾಪಾರಸ್ಥರು ಹಾಗೂ ಹೊಟೇಲ್ ಮಾಲಕರು ಇದನ್ನು ಪಾಲಿಸದಿದ್ದರೆ ಕಾನೂನು ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಸ್ಸಿಒ ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ 23 ನೇ ಸಭೆಯು ಇಸ್ಲಾಮಾಬಾದ್‌ನಲ್ಲಿ ಅಕ್ಟೋಬರ್ 15 ಮತ್ತು 16 ರಂದು ನಡೆಯಲಿದೆ. ಭಾನುವಾರ ವಿದೇಶಿ ನಿಯೋಗಗಳು ಬರಲು ಪ್ರಾರಂಭಿಸುತ್ತಿದ್ದಂತೆ, 76 ಸದಸ್ಯರ ರಷ್ಯಾದ ನಿಯೋಗ ಮತ್ತು ಎಸ್‌ಸಿಒದ ಏಳು ಪ್ರತಿನಿಧಿಗಳು ದೇಶವನ್ನು ತಲುಪಿದರು.